ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಶಾಲ್ಮಲಾ ನದಿ ತೀರದಲ್ಲಿಯ ಸೋದೆ ಅರಸರ ಕಾಲದ ರಾಜಧಾನಿ, ಐತಿಹಾಸಿಕ ಸೋಂದಾ ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಹುಲೇಕಲ್ ಕಂದಾಯ ಇಲಾಖೆಯ, ಉಪ ನಿರೀಕ್ಷಕ ಅಣ್ಣಪ ಮಡಿವಾಳ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹನೀಯರನ್ನು ಸ್ಮರಿಸಿದರು. ಸೋಂದಾ ಊರಿನ ಗಣ್ಯರಾದ ಗಣಪತಿ ಜೋಶಿ ಬಾಡಲಕೊಪ್ಪ, ಜಾಗೃತ ವೇದಿಕೆ ಸೋಂದಾದ ರತ್ನಾಕರ ಹೆಗಡೆ ಬಾಡಲಕೊಪ್ಪ, ವೇದಿಕೆಯ ಸದಸ್ಯರಾದ,ಮಾಬ್ಲೇಶ್ವರ ಹೆಗಡೆ ಬಂದೀಸರ, ಸತ್ಯನಾರಾಯಣ ಹೆಗಡೆ ಹಳೇಯೂರು, ಬಾಲಚಂದ್ರ ಭಟ್ ಬಸವನಕೊಪ್ಪ, ಮಹೇಶ್ ಹೆಗಡೆ ಯಾತ್ರೀ ನಿವಾಸ,ಬೈರುಂಭೆ ಗ್ರಾಮ ಪಂಚಾಯತ ಸದಸ್ಯರಾದ ನಾಗಪ್ಪ ಪಟಗಾರ, ಸೋಂದಾ ಕ್ರಾಸ್ ನ ತೌಶಿಪ್ ಇಸೂಬ್ ಖಾನ್.ಗ್ರಾಮ ಲೆಕ್ಕಿಗರಾದ ಕುಮಾರಿ ಗೌರಿ ಕಂದಾಯ ಇಲಾಖೆಯ ನೌಕರರು ಹಾಜರಿದ್ದರು.ಜಾಗೃತ ವೇದಿಕೆಯ ಕಾರ್ಯದರ್ಶಿ , ಶ್ರೀಧರ ಹೆಗಡೆ ಗುಡ್ಡೇಮನೆ ಸ್ವಾಗತಿಸಿದರು, ವಾಸುದೇವ ಭಟ್ ಕಮಾಟಗೇರಿ ಆಭಾರಮನ್ನಿಸಿದರು.ಭಾಸ್ಕರ ಹೆಗಡೆ ಉಳ್ಳೀಕೋಪ್ಪ, ನಿರ್ವಹಿಸಿದರು.ಧ್ವಜ ಕಟ್ಟುವಲ್ಲಿ ಇಸೂಬ್ ಖಾನ್, ಬಾಲಚಂದ್ರ, ಹಾಗೂ ಅಲ್ಲೀಖಾನ್, ಸಹಕರಿಸಿದರು.