ಕಾರವಾರ: ನಗರದ ಬಾಲಮಂದಿರ ಪ್ರೌಢಶಾಲೆಯಲ್ಲಿ ವಿಶ್ವ ಕೈ ತೊಳೆಯುವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಆರಂಭದಲ್ಲಿ ಶಿಕ್ಷಕ ಮಹೇಶ ಭಟ್, ಪ್ರತಿನಿತ್ಯ ನಮ್ಮ ಕೈಗಳನ್ನು ಸ್ವಚ್ಛವಾಗಿ ಹೇಗೆ ತೊಳೆದುಕೊಳ್ಳಬೇಕು ಎಂಬುವುದರ ಕುರಿತು ಪ್ರಾತ್ಯಕ್ಷಿಕ ವಿವರಣೆ ನೀಡಿದರು. ಅದೇ ರೀತಿ ದೈಹಿಕ ಶಿಕ್ಷಣ ಶಿಕ್ಷಕ ರತ್ನಾಕರ ಮಡಿವಾಳ ಕೈ ತೊಳೆಯುವ ವಿಧಾನವನ್ನು ಮಾಡಿ ತೋರಿಸಿದರು.
ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅಂಜಲಿ ಮಾನೆ ಮಾತನಾಡಿ, ನಾವು ಆಹಾರವನ್ನು ನಮ್ಮ ಕೈಯ ಮೂಲಕವೇ ಸೇವಿಸುವುದರಿಂದ ನಮ್ಮ ಕೈ ಶುಭ್ರವಾಗಿರಬೇಕಾದುದು ಅತೀ ಅವಶ್ಯಕವಾಗಿದೆ. ನಮ್ಮ ಕೈಗಳಲ್ಲಿರುವ ರೋಗಾಣುಗಳು ಆಹಾರದ ಮೂಲಕ ದೇಹವನ್ನು ಸೇರಿದರೆ ನಾವು ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಆದ್ದರಿಂದ ಎಲ್ಲರೂ ಶುದ್ಧವಾಗಿ ಕೈಗಳನ್ನು ತೊಳೆದುಕೊಳ್ಳಬೇಕು ಎಂದು ನುಡಿದರು.
ವಿದ್ಯಾರ್ಥಿಗಳಾದ ಸಾನ್ವಿ ಎಸ್.ನಾಯ್ಕ, ಕಂಚಿಕಾ, ಸಂಜನಾ ಆರ್.ನೀರಾವರಿ, ಡಿಸೆಲ್ವಾ ಗುಡಿನೋ ಹಾಗೂ ಸೃಷ್ಟಿ ಎಸ್.ಸನದಿ ‘ಕೈ ತೊಳೆಯುವುದುರ ಮಹೋತ್ಸವದ’ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಸಮಾರಂಭದಲ್ಲಿ ಶಿಕ್ಷಕ ನಜಿರುದ್ದೀನ್ ಸೈಯದ್, ಭಾರತಿ ಐಸಾಕ್, ಪ್ರಶಾಂತ ನಾಯ್ಕ ಮೊದಲಾದ ಶಿಕ್ಷಕ- ಶಿಕ್ಷಕಿಯರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.