ಕಾರವಾರ: ತಾಲೂಕಿನ ಅಣಶಿ ಘಟ್ಟದಲ್ಲಿ ಮಳೆಯಿಂದ ಮತ್ತೆ ಗುಡ್ಡ ಕುಸಿತವಾಗಿದ್ದು, ಸುಮಾರು ನಾಲ್ಕು ಘಂಟೆಗೂ ಅಧಿಕ ಕಾಲ ರಾಜ್ಯ ಹೆದ್ದಾರಿ ಸಂಚಾರ ಬಂದ್ ಆದ ಘಟನೆ ಮಂಗಳವಾರ ನಡೆಯಿತು.
ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಗೆ ಕಾರವಾರದಿಂದ ಜೊಯಿಡಾ ಮೂಲಕ ಬೆಳಗಾವಿ ಸಂಪರ್ಕಿಸುವ ಸದಾಶಿವಗಡ ಔರಾದ್ ರಾಜ್ಯ ಹೆದ್ದಾರಿಯ ಅಣಶಿ ಘಟ್ಟದಲ್ಲಿ ಕುಸಿತವಾಗಿದೆ. ಮಳೆಯಿಂದ ಕಳೆದ ತಿಂಗಳು ಸಹ ಗುಡ್ಡ ಕುಸಿತವಾಗಿದ್ದು, ಜಿಲ್ಲಾಡಳಿತ ಕುಸಿದ ಗುಡ್ಡವನ್ನ ತೆರವು ಮಾಡಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು. ಮಂಗಳವಾರ ಸಹ ದೊಡ್ಡ ಪ್ರಮಣದಲ್ಲೇ ಕುಸಿತವಾಗಿದ್ದು, ಕಲ್ಲು- ಮಣ್ಣುಗಳು ರಸ್ತೆಗೆ ಬಂದು ಬಿದ್ದಿದ್ದು, ವಾಹನಗಳು ಮುಂದೆ ಸಾಗದಂತಾಗಿತ್ತು.
ಇನ್ನು ವಿಷಯ ತಿಳಿದ ತಕ್ಷಣ ಕಾರವಾರ ತಹಶೀಲ್ದಾರ್ ನಿಶ್ಚಲ್ ನರೋನಾ ಸೇರಿದಂತೆ ಕಂದಾಯ ಇಲಾಖೆ, ಲೋಕೋಪಯೋಗಿ, ಪೊಲೀಸ್ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಮೂಲಕ ರಸ್ತೆಯಲ್ಲಿ ಬಿದ್ದಿದ್ದ ಮಣ್ಣು- ಕಲ್ಲನ್ನ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಗುಡ್ಡದ ಮಣ್ಣು ಇನ್ನು ಕುಸಿಯುವ ಹಂತದಲ್ಲಿದ್ದು, ಮಳೆ ಮುಂದುವರೆದರೆ ಮತ್ತೆ ಕುಸಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬಾರಿ ವಾಹನ ಓಡಾಡಕ್ಕೆ ಹೆದ್ದಾರಿಯಲ್ಲಿ ಅವಕಾಶ ಮಾಡಿಕೊಟ್ಟಿಲ್ಲ.
ಕೋಟ್…
ಅಣಶಿ ಬಳಿ ಗುಡ್ಡ ಕುಸಿತವಾದ ತಕ್ಷಣ ಸ್ಥಳಕ್ಕೆ ಹೋಗಿ ಜೆಸಿಬಿ ಮೂಲಕ ತೆರವು ಮಾಡಿ ಟೆಂಪೋ, ಲಘು ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ತೆರವು ಮಾಡಿದರೆ ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ಇದ್ದು, ವಾಹನ ಓಡಾಟಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಮತ್ತೆ ಗುಡ್ಡ ಕುಸಿತವಾದರೆ ಕದ್ರಾದಲ್ಲಿಯೇ ಜೆಸಿಬಿ ಇರಲು ತಿಳಿಸಿದ್ದು, ತಕ್ಷಣ ತೆರವು ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದAತೆ ಕ್ರಮ ಕೈಗೊಳ್ಳಲಾಗುವುದು.
• ನಿಶ್ಚಲ್ ನರೋನಾ, ತಹಶೀಲ್ದಾರ