ಶಿರಸಿ: ನಗರದ ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ಶಿರಸಿ ತಾಲೂಕು ಭಾರತ ಸೇವಾದಳ ಶಾಖಾ ನಾಯಕ / ನಾಯಕಿಯರ ಪುನಃಶ್ಚೇತನ ಶಿಬಿರವನ್ನು ಜು.30 ಶನಿವಾರದಂದು ಸಭಾಧ್ಯಕ್ಷ, ಸನ್ಮಾನ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡುತ್ತ, ಸೇವಾದಳದ ಕಾರ್ಯಚಟುವಟಿಕೆಗಳನ್ನು ಮೊದಲಿನಿಂದಲೂ ಅರಿತಿದ್ದೇನೆ. ಸೇವಾದಳದ ಶಿಕ್ಷಣದಿಂದ ಮಕ್ಕಳು ಮೌಲ್ಯ ಸಹಕಾರ, ಶಿಸ್ತು, ಸಹಬಾಳ್ವೆ, ಗುಣಗಳನ್ನು ಬೆಳೆಸಿಕೊಂಡಿರುತ್ತಾರೆ. ಶಿಬಿರದ ಪ್ರಯೋಜನವನ್ನು ಅಂತಿಮವಾಗಿ ಮಗುವಿನಲ್ಲಿ ಕಾಣೋಣ ಎಂಬ ಮಾತನ್ನು ಹೇಳುತ್ತ ಶುಭ ಕೋರಿದರು.
ಸಮಾರಂಭದ ಅಧ್ಯಕ್ಷ ವಿ. ಎಸ್. ನಾಯಕ, ಜಿಲ್ಲೆಯಲ್ಲಿ ಹಾಗೂ ತಾಲೂಕುಗಳಲ್ಲಿ ಭಾರತ ಸೇವಾದಳ ಉತ್ತಮ ಚಟುವಟಿಕೆಗಳೊಂದಿಗೆ ಸೇವಾದಳವನ್ನು ರಾಷ್ಟ್ರವ್ಯಾಪಿಯಾಗಿ ಮಾಡೋಣ ಎಂದು ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿ ಸದಸ್ಯ ಸುರೇಶ್ಚಂದ್ರ ಹೆಗಡೆ, ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ವೀಣಾ ಶೆಟ್ಟಿ, ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಪ್ರದೀಪ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ದಿನೇಶ ಶೇಟ, ತಾಲೂಕು ಸಮಿತಿ ಉಪಾಧ್ಯಕ್ಷರಾದ ಶ್ರೀಮತಿ ವೀಣಾ ಭಟ್ಟ ತಾಲೂಕು ಸಮಿತಿ ಕೋಶಾಧ್ಯಕ್ಷ ಕುಮಾರ ನಾಯ್ಕ, ಸದಸ್ಯರುಗಳಾದ ಸುಬ್ರಾಯ ಹೆಗಡೆ, ಸತೀಶ ಹೆಗಡೆ, ಕೆ.ಎನ್. ನಾಯ್ಕ, ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ, ಪಿ.ಎನ್. ಜೋಗಳೇಕರ, ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ಅಶೋಕ ಭಜಂತ್ರಿ ಇವರು ಸರ್ವರನ್ನು ಸ್ವಾಗತಿಸಿದರೆ ಉದಯ ಹೆಗಡೆ ನಿರೂಪಿಸಿದರು. ಸುಧಾಮ ಪೈ ವಂದಿಸಿದರು.
115 ಶಿಕ್ಷಕರು, ಲೇಜಿಮ್ ಡೆಂಬಲ್ಸ್, ಸಾಭಿನಯಗೀತೆ ಪ್ರದರ್ಶನವಾಯಿತು, ರಾಷ್ಟ್ರಧ್ವಜದ ಮಾಹಿತಿಗಳನ್ನು ಪುನಃಶ್ಚೇತನ ಶಿಬಿರದಲ್ಲಿ ಪಡೆದುಕೊಂಡರು.