ಶಿರಸಿ: ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ಒಂಭತ್ತನೆಯ ತರಗತಿಯ ವಿದ್ಯಾರ್ಥಿಕುಮಾರ ಸುಘೋಷ್ ಜೋಶಿ ನ್ಯಾಷನಲ್ ಸೈಬರ್ ಓಲಂಪಿಯಾಡ್ ಅವರು ನಡೆಸಿದ ಪರೀಕ್ಷೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 361ನೇ ಸ್ಥಾನ ಹಾಗೂ ಝೋನಲ್ ಮಟ್ಟದಲ್ಲಿ 23ನೇ ಸ್ಥಾನ ಪಡೆದಿದ್ದಾನೆ.
ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾದ ಕುಮಾರ ಅನಿಕೇತ್ ಶೇಟ್ ಇವನು ಸೈನ್ಸ್ ಓಲಂಪಿಯಾಡ್ ಫೌಂಡೇಷನ್ ಅವರು ನಡೆಸಿದ ಪರೀಕ್ಷೆಯಲ್ಲಿ ಸಾಧನೆ ಮಾಡಿ ನಗದು 1000 ರೂಪಾಯಿಯ ಪುರಸ್ಕಾರ ಪಡೆದಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 21 ನೇ ಸ್ಥಾನ, ಝೋನಲ್ ಹಂತದಲ್ಲಿ ಮೊದಲ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.