Slide
Slide
Slide
previous arrow
next arrow

ಮರಳು ಅಕ್ರಮ ಸಾಗಾಟದ ವಾಹನಗಳ ಓಡಾಟದಿಂದ ಹದಗೆಟ್ಟ ಗೊರಟನಮನೆ ರಸ್ತೆ

300x250 AD

ಸಿದ್ದಾಪುರ: ತಾಲೂಕಿನ ಕಾನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಯ ಶಿರಸಿ- ಸಿದ್ದಾಪುರ ಮುಖ್ಯ ರಸ್ತೆ ಮಂಡ್ಲಿಕೊಪ್ಪದಿಂದ ಗೊರಟನಮನೆಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ರಸ್ತೆ ಹದಗೆಟ್ಟಿದ್ದು ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಸರ್ವಋತು ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಗ್ರಾಮದಲ್ಲಿಯ ಜನರು ಮುಖ್ಯ ರಸ್ತೆಗೆ ಬರಬೇಕೆಂದರೆ ಮೂರು ಕಿಲೋಮೀಟರ್ ಕಾಡಿನಲ್ಲಿ ನಡೆದು ಬರಬೇಕಾಗುತ್ತದೆ. ಮಳೆಗಾಲದಲ್ಲಿ ವಾಹನಗಳು ಓಡಾಡುವುದು ಕಷ್ಟಸಾಧ್ಯವಾದುದು. ಇದರಿಂದ ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ತುಂಬಾ ಕಷ್ಟ ಪಡಬೇಕಾಗಿದೆ. ಅನಾರೋಗ್ಯ ಸಂಭವಿಸಿದರೆ ಹೋಗುವ ಪರಿಸ್ಥಿತಿ ಹೇಳತೀರದು. ಈ ಭಾಗದಲ್ಲಿ ಅಕ್ರಮವಾಗಿ ಮರಳುಗಾಡಿಗಳು ರಾತ್ರಿ-ಹಗಲೆನ್ನದೆ ಓಡಾಡುತ್ತಿವೆ. ಮರಳು ಮಾಫಿಯಾ ತುಂಬಾ ಇರುವುದರಿಂದ ಇಲ್ಲಿ ಮರಳು ಗಾಡಿಯವರು ಯಾವುದೇ ಅಧಿಕಾರಿಗಳ ಭಯ ಇಲ್ಲದೆ ದಿನ ನಿತ್ಯ ಯಥೆಚ್ಯವಾಗಿ ಮರಳು ಸಾಗಣೆ ಮಾಡುತ್ತಾರೆ. ಇದರಿಂದ ರಸ್ತೆ ತುಂಬಾ ಹದಗೆಟ್ಟಿದೆ. ಮಳೆಗೆ ನೀರು ರಸ್ತೆಯ ಮೇಲೆ ಹರಿದು ರಸ್ತೆ ಕೆಸರು ಗದ್ದೆಯಂತಾಗಿವೆ.ಇಲ್ಲಿ ನಡೆದುಕೊಂಡು ಹೋಗುವುದಕ್ಕೂ ಅಸಾಧ್ಯವಾಗಿದೆ. ಇನ್ನು ವಾಹನ ಸಂಚಾರವಂತು ಸಾಧ್ಯವೇ ಇಲ್ಲ. ಮೂರು ಕಿಮೀ ಹೋಗಬೇಕೆಂದರೆ ಅದು ದೊಡ್ಡ ಸಾಹಸವನ್ನೆ ಮಾಡಬೇಕು. ಇಲ್ಲಿ ಮರಳು ಸಾಗಾಣಿಕೆ ಮಾಡುತ್ತಿರುವವರನ್ನು ಕೇಳುವವರಿಲ್ಲವಾಗಿದೆ. ಇಲಾಖೆಯ ಅಧಿಕಾರಿಗಳು ಇತ್ತಕಡೆ ನೋಡುತ್ತಿಲ್ಲಾ ಎಂದು ಸ್ಥಳೀಯರು ಆರೋಪಿಸುತ್ತಾರೆ.

300x250 AD

ಊರಿಗೆ ನಮ್ಮ ಪಂಚಾಯತದಿಂದ ಯಾವುದೇ ಒಂದು ಸೌಲಭ್ಯ ಸಿಕ್ಕಿಲ್ಲ ಎನ್ನುವ ಬೇಸರ ಗ್ರಾಮಸ್ಥರಲ್ಲಿದೆ. ಒಂದೇ ಮನೆ ಇರುವಲ್ಲಿ ಲಕ್ಷಗಟ್ಟಲೆ ಹಣ ಹಾಕಿ ಎರಡು ಮೂರು ಕಿಮೀ ರಸ್ತೆ ಮಾಡಿದ ಉದಾಹರಣೆಗಳಿವೆ. ಆದರೆ ಜನ ಪ್ರತಿನಿಧಿಗಳಿಗೆ ನಮ್ಮ ರಸ್ತೆ ಕಾಣುತ್ತಿಲ್ಲವೇ? ಈ ಹಿಂದೆ ರಸ್ತೆ ಮಾಡುವಂತೆ ಗ್ರಾಮ ಪಂಚಾಯತಿಗೆ ಹಲವು ಬಾರಿ ಅರ್ಜಿ ನೀಡಿದ್ದೇವೆ. ಅಧ್ಯಕ್ಷರು ಉಪಾಧ್ಯಕ್ಷರಿಗೂ ಮಾಹಿತಿ ನೀಡಿದ್ದೇವೆ. ಆದರೆ ಯಾವುದಕ್ಕೂ ಯಾರು ಸ್ಪಂದಿಸಿಲ್ಲ. ಕಳೆದ ವರ್ಷ ೨೦೦೦೦ ಖರ್ಚು ಮಾಡಿ ರಸ್ತೆ ರಿಪೇರಿ ಮಾಡಿಕೊಂಡಿದ್ದೇವೆ. ಮಂಡ್ಲಿಕೊಪ್ಪದಿಂದ- ಗೊರಟನಮನೆವರೆಗೆ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share This
300x250 AD
300x250 AD
300x250 AD
Back to top