ಸಿದ್ದಾಪುರ: ಅಪರಿಚಿತ ವ್ಯಕ್ತಿಗಳು ಸಿದ್ಧಾಪುರದ ಗಜಾನನ ಎಂಬುವವರ ಬಳಿ ಜು. 21 ರಂದು One Time Password (OTP) ಪಡೆದು ರೂ. 1,79,929/ ಹಣವನ್ನು ಬ್ಯಾಂಕ್ ಖಾತೆಯಿಂದ ದೋಚಿದ ಬಗ್ಗೆ ಸೈಬರ್ Portal ದೂರು ದಾಖಲಾಗಿತ್ತು. ದೂರು ದಾಖಲಾದ ಕೂಡಲೇ ಕಾರ್ಯಪವೃತ್ತರಾದ CEN ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿಗಳು , ಸಂಬಂಧಪಟ್ಟ ನೋಡಲ್ ಅಧಿಕಾರಿಗಳೊಂದಿಗೆ ಪತ್ರ-ವ್ಯವಹಾರ ಮಾಡಿ ಹಣ ಮರು ಜಮಾ ಮಾಡಿಸಲಾಗಿದೆ.
ಅಲ್ಲದೇ, ಇದೇ ರೀತಿಯಲ್ಲಿ ಜ.10,2022 ರಂದು ನೇವಲ್ – ಬೇಸ್ ಮನೋಜ್ ಎಂಬುವವರ ಬ್ಯಾಂಕ್ ಖಾತೆಯಿಂದ ರೂ.1,83,678,
ಸೆ.08,2021 ರಂದು ಅಂಕೋಲಾ ಮಂಜುನಾಥ್ ರವರ ಬ್ಯಾಂಕ್ ಖಾತೆಯಿಂದ ರೂ. 3,77,700/ ಮತ್ತು ಏ. 27,2022 ರಂದು ಹೊನ್ನಾವರದ ತಾರ ಸುಭಾಷ್ ರವರ ಬ್ಯಾಂಕ್ ಖಾತೆಯಿಂದ ರೂ 50,000/ ಹಣವನ್ನು ಸಂಬಂಧಪಟ್ಟ ನೋಡಲ್ ಅಧಿಕಾರಿಗಳೊಂದಿಗೆ ಪತ್ರ-ವ್ಯವಹಾರ ಮಾಡಿ ಹಣ ಮರು ಜಮಾ ಮಾಡಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಈ ತರಹದ ಸೈಬರ್ ಕ್ರೈಂ ಗಳು ಹೆಚ್ಚುತ್ತಿದ್ದು ಇಲಾಖೆಯಿಂದ ಸಾರ್ವಜನಿಕರಿಗೆ ಅಗತ್ಯ ಸೂಚನೆಗಳನ್ನು ಹೊರಡಿಸಲಾಗಿದೆ:
1. ಯಾವುದೇ ಬ್ಯಾಂಕ್ ಗಳಾಗಲಿ, ಮೊಬೈಲ್ ಕಂಪೆನಿಗಳಾಗಲಿ ಇನ್ಯಾವುದೇ ಸಂಸ್ಥೆಗಳಾಗಲಿ ನವೀಕರೀಸುವಂತಹ ಚಟುವಟಿಕೆಗಾಗಿ ನಿಮ್ಮ ಕವೈಸಿ/ಆಧಾರ್ / ಡೆಬಿಟ್ ಕ್ರೆಡಿಟ್ ಕಾರ್ಡ ಓಟಿಪಿ ವಿವರಗಳನ್ನು ಹಾಗೂ ಯಾವುದೆ ಅಪ್ಲಿಕೇಶನ್ ಡೌನಲೋಡ್ ಮಾಡಲು ನಿಮ್ಮನ್ನು ಎಂದಿಗೂ ಹೇಳುವುದಿಲ್ಲ . ಆದ್ದರಿಂದ ಮೋಸದ ಕರೆಗಳಿಗೆ ನಿಮ್ಮ ಕೆವೈಸಿ/ಆಧಾರ್/ಡೆಬಿಟ್ ಕ್ರೆಡಿಟ್ ಕಾರ್ಡ,ಓಟಿಪಿ ವಿವರಗಳನ್ನು ನೀಡದಿರಿ.
2. ಗೂಗಲ್ ಪೇ/ ಪೋನ್ ಪೇ/ತೇಜ್ ಆಪ್ ಮೂಲಕ ಹಣ ವರ್ಗಾವಣೆ ಮಾಡಿ ಹಣವು ಸಂಬಂಧಪಟ್ಟವರಿಗೆ ತಲುಪದಿದ್ದರೆ ವೆಬ್ಸೈಟ್ನಲ್ಲಿ ಕಸ್ಟಮರ್ ಕೇರ್ ನಂಬರ್ ಅನ್ನು ಹುಡುಕಿ ಅವರಿಗೆ ಕಾಲ್ ಮಾಡಿ ಅವರು ಒಂದು ಲಿಂಕ್/ಸಂದೇಶವನ್ನು/ಯುಪಿಐ ಪಿನ್ ಅನ್ನು ಮತ್ತೊಂದು ನಂಬರ್ಗೆ ಕಳುಹಿಸಲು ಹೇಳಿದರೆ ಕಳುಹಿಸಬೇಡಿ ಹಾಗೂ ಅಂತಹ ಕಸ್ಟಮರ್ ಕೇರ್ ನಂಬರ್ಗಳು ನಿಜವಾದ ಕಸ್ಟಮರ್ ಕೇರ್ ನಂಬರ್ ಗಳಾಗಿರುವುದಿಲ್ಲ
3. ಒಂದು ವೇಳೆ ಸಾರ್ವಜನಿಕರು ಸೈಬರ್ ಅಪರಾಧದ ತೊಂದರೆಗೆ ಒಳಗಾಗಿದ್ದರೆ ಕೂಡಲೇ 1930/ 112 ಗೆ ಕರೆ ಮಾಡಿ ದೂರು ದಾಖಲಿಸಿ, ಸೈಬರ್ Portal; www.cybercrime.gov.in ರಲ್ಲಿ ದೂರನ್ನು ದಾಖಲಿಸಲು ಕೋರಿದೆ.
ಅಲ್ಲದೇ ಹತ್ತಿರದ ಪೊಲೀಸ್ ಠಾಣೆ ಅಥವಾ CEN ಪೊಲೀಸ್ ಠಾಣೆಗೆ ದೂರು ದಾಖಲಿಸಬಹುದು.