ಯಲ್ಲಾಪುರ: ಕೃಷಿ,ತೋಟಗಾರಿಕೆ,ಪಶುಸಂಗೋಪನಾ ಇಲಾಖೆಗಳು ಸಮರ್ಪಕ ರೀತಿಯಲ್ಲಿ ಕೆಲಸ ಮಾಡಿದರೆ,ರೈತರಿಗೆ ನೆರವಾಗಲು ಸಾಧ್ಯ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ಗುರುವಾರ ಪಟ್ಟಣದ ತಾಲೂಕಾ ಪಂಚಾಯತ ಆವಾರದ ಗಾಂಧಿಕುಟೀರದಲ್ಲಿ ಜಿ.ಪಂ,ತಾಲೂಕಾ ಆಡಳಿತ,ಕೃಷಿ ಇಲಾಖೆ ಆಶ್ರಯದಲ್ಲಿ ಕೃಷಿ ಅಭಿಯಾನದ ಪ್ರಯುಕ್ತ ಕೃಷಿ ಸಂಜಿವಿನಿ ವಾಹನ,ಕೃಷಿ ಅಭಿಯಾನ ರಥ,ಸಂಚಾರಿ ಪಶು ಚಿಕಿತ್ಸಾ ಘಟಕ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಮನೆ ಬಾಗಿಲಲ್ಲೆ ಮಣ್ಣಿನ ಪರೀಕ್ಷೆ ಮಾಡಲು ಕೃಷಿ ಸಂಜಿವಿನಿ ವಾಹನ ನೀಡಲಾಗಿದೆ.ಜಿಲ್ಲೆಗೆ ಒಂದು ಕೃಷಿ ಸಂಜೀವಿನಿ ವಾಹನ ಬಂದಿದ್ದು,ಅದನ್ನು ನೀಡಲಾಗಿದೆ.ಅದರಂತೆ ಪಶು ಸಂಗೋಪನಾ ಇಲಾಖೆಯ ಸಂಚಾರಿ ಪಶುಚಿಕಿತ್ಸಾ ಘಟಕ ತಾಲೂಕಿಗೆ 2 ಬಂದಿದ್ದು,ಮುಂಡಗೋಡಿಗೆ ಒಂದು ವಾಹನ ಬಂದಿದೆ.ಇವೆಲ್ಲವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತೃಸ್ತರಿಗೆ ಪರಿಹಾರ ಪ್ರಮಾಣಪತ್ರ ನೀಡಲಾಯಿತು.
ಇಒ ಜಗದೀಶ ಕಮ್ಮಾರ,ತಹಶಿಲ್ದಾರ ಶ್ರೀಕೃಷ್ಣ ಕಾಮ್ಕರ,ಸಹಾಯಕ ಕೃಷಿ ನಿರ್ಧೆಶಕ ನಾಗರಾಜ ನಾಯ್ಕ,ಆತ್ಮ ಯೋಜನೆಯ ತಾಂತ್ರಿಕ ಸಹಾಯಕ ಎಂ.ಜಿ.ಭಟ್ಟ,ಕೃಷಿ ಸಹಾಯಕಿ ಪ್ರಮೀಳಾ ಘೋಡ್ಸೆ,ಪಶುಸಂಗೋಪನೆ ಇಲಾಖೆಯ ಉಪನಿರ್ದೆಶಕ ಡಾ.ರಾಕೇಶ,ಸಹಾಯಕ ನಿರ್ಧೆಶಕ ಡಾ.ಸುಬ್ರಾಯ ಭಟ್ಟ ಸಾಮಾಜಿಕ ಕಾರ್ಯಕರ್ತರಾದ ಆರ್.ಎಸ್.ಭಟ್ಟ,ಉಮೇಶ ಭಾಗ್ವತ್,ಮುಂತಾದವರು ಇದ್ದರು.