ಹೊನ್ನಾವರ: ಸೆಲ್ಕೋ ಸೋಲಾರ್ ಸಂಸ್ಥೆಯಿಂದ ಮತ್ತು ದಾನಿಗಳಿಂದ ರಾಮತೀರ್ಥ ದೇವಸ್ಥಾನ, ತೀರ್ಥ ಮತ್ತು ಶ್ರೀಧರಾಶ್ರಮಗಳಿಗೆ ಬೆಳಕು ಕೊಡುವಂತೆ ಮೂರು ಸೋಲಾರ್ ದೀಪಗಳನ್ನು ಅಳವಡಿಸಿಕೊಡುವುದಾಗಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಬಿ.ಹೆಗಡೆ ಹೆರವಟ್ಟಾ ಹೇಳಿದ್ದಾರೆ.
ರಾಮತೀರ್ಥದ ಸ್ನಾನಕ್ಕೆ ಮತ್ತು ದೇವರ ದರ್ಶನಕ್ಕೆ ಬೆಳಗಿನ ಜಾವ 4 ಗಂಟೆಗೆ ಸಾರ್ವಜನಿಕರು ಹೋಗುವುದರಿಂದ ಕೆಲವು ದಿನ ಬೀದಿ ದೀಪ ಇಲ್ಲದೆ ಜನರಿಗೆ ಸಮಸ್ಯೆಯಾಗಿತ್ತು. ಇದನ್ನು ಮೋಹನ ಹೆಗಡೆಯವರ ಗಮನಕ್ಕೆ ತಂದಾಗ ಇಂದು ಬಂದು ಸ್ಥಳಪರಿಶೀಲಿಸಿ ಬೇಗ ಸೋಲಾರ್ ದೀಪಗಳನ್ನು ಅಳವಡಿಸಿಕೊಡುವುದಾಗಿ ಹೇಳಿದ್ದಾರೆ. ಅವರು ರಾಮತೀರ್ಥದ ಆಶ್ರಮದಲ್ಲಿ ಶ್ರೀಧರರ ಪಾದುಕೆಯ ದರ್ಶನ ಮಾಡಿ 50 ವರ್ಷಗಳಿಂದ ಆಶ್ರಮ ನಡೆಸುತ್ತಿರುವ ಜನಾರ್ಧನ ಅವರೊಂದಿಗೆ ಮಾತನಾಡಿದರು. ಆಶ್ರಮದ ವತಿಯಿಂದ ಅವರಿಗೆ ಪುಸ್ತಕದ ಕಾಣಿಕೆಯನ್ನು ನೀಡಲಾಯಿತು.