ದಾಂಡೇಲಿ: ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ದಂಡಕಾರಣ್ಯ ಇಕೋ ಪಾರ್ಕಿನ ಹತ್ತಿರದ ರಸ್ತೆಯಲ್ಲಿ ಸೆಪ್ಟಿಕ್ ಚೇಂಬರೊಂದು ಬಾಯ್ತೆರೆದುಕೊಂಡು ಅಪಾಯವನ್ನು ಅಹ್ವಾನಿಸುವಂತಿದೆ.
ಇನ್ನು ಇದೇ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೊಂದರಲ್ಲಿ ತ್ಯಾಜ್ಯ ಹರಡಿಕೊಂಡು ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ. ಬಾಂಬೆಚಾಳ, ಡಿಎಫ್‌ಎ ಪ್ರದೇಶ ವ್ಯಾಪ್ತಿಯ ಜನರು ಮಾರುಕಟ್ಟೆ ಹಾಗೂ ಇನ್ನಿತರ ಕಡೆಗಳಿಗೆ ಹೋಗಲು ಇದೇ ರಸ್ತೆಯನ್ನು ಅವಲಂಭಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಓಡಾಡುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೇ ಅಪಾಯ ತಪ್ಪಿದ್ದಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ ಬಾಯ್ತೆರೆದುಕೊಂಡ ಸೆಪ್ಟಿಕ್ ಚೆಂಬರಿಗೆ ಮುಚ್ಚಳದ ವ್ಯವಸ್ಥೆ ಹಾಗೂ ಇಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನಗರದ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಶೇಖ್ ನಗರಸಭೆಗೆ ಮನವಿ ಮಾಡಿದ್ದಾರೆ.