Slide
Slide
Slide
previous arrow
next arrow

ಶಿರಸಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ

300x250 AD

ಶಿರಸಿ: 2022-23ನೇ ಸಾಲಿನ ಶಿರಸಿ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಎಮ್.ಜೆ.ಎಫ್. ಲಯನ್ ತ್ರಿವಿಕ್ರಮ ಪಟವರ್ಧನ, ಕಾರ್ಯದರ್ಶಿಯಾಗಿ ಎಮ್.ಜೆ.ಎಫ್. ಲಯನ್ ರಮಾ ಪಟವರ್ಧನ ಮತ್ತು ಖಜಾಂಚಿಯಾಗಿ ಲಯನ್ ರಾಜಲಕ್ಷ್ಮಿ ಹೆಗಡೆ ಪದಗ್ರಹಣ ಮಾಡಲಿದ್ದಾರೆ.
ಶಿರಸಿ ಲಿಯೋ ಕ್ಲಬ್ ಅಧ್ಯಕ್ಷರಾಗಿ ಲಿಯೋ ಅನನ್ಯಾ ಹೆಗಡೆ, ಕಾರ್ಯದರ್ಶಿಯಾಗಿ ಲಿಯೋ ಶ್ರೇಯಾ ಬಡಿಗೇರ, ಖಜಾಂಚಿಗಳಾಗಿ ಲಿಯೋ ಪೂರ್ವಿ ಮುರಡೇಶ್ವರ ಮತ್ತು ಲಿಯೋ ಕ್ಲಬ್ ಶ್ರೀನಿಕೇತನ ಅಧ್ಯಕ್ಷರಾಗಿ ಲಿಯೋ ಹರ್ಷಿತ ಭಾಗವತ, ಕಾರ್ಯದರ್ಶಿಯಾಗಿ ಲಿಯೋ ಸುಘೋಷ ಜೋಶಿ, ಖಜಾಂಚಿಯಾಗಿ ಲಿಯೋ ಸ್ತುತಿ ಹೆಗಡೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಪದಗ್ರಹಣ ಸಮಾರಂಭವು ಜು.22 ರಂದು ಶಿರಸಿ ಲಯನ್ಸ್ ಭವನದಲ್ಲಿ ಸಂಜೆ 6-00 ಘಂಟೆಗೆ ನಡೆಯಲಿದೆ. ಪದಗ್ರಹಣ ಅಧಿಕಾರಿಯಾಗಿ ಡಿಸ್ಟ್ರಿಕ್ಟ್ ಜಿ.ಎಮ್.ಟಿ. ಕೋ-ಆರ್ಡಿನೇಟರ ಪಿ.ಎಮ್.ಜೆ.ಎಫ್ ಲಯನ್ ಜೈಅಮೊಲ ನಾಯ್ಕ ಮತ್ತು ಮುಖ್ಯ ಅತಿಥಿಗಳಾಗಿ ರೀಜನ್ ಚೇರಮನ್ ರೀಜನ್‌X ಪಿ.ಎಮ್.ಜೆ.ಎಫ್. ಲಯನ್ ಡಾ. ಕೀರ್ತಿ ನಾಯ್ಕ ಉಪಸ್ಥಿತರಿರಲಿದ್ದಾರೆ.
ಅಂತೆಯೇ ಶಿರಸಿ ಲಯನ್ಸ್ ಕ್ಲಬ್, ಸ್ಥಾಪನೆಯಾಗಿ 50 ವರ್ಷ ಪೂರೈಸಿದ್ದು, ಸುವರ್ಣ ಮಹೋತ್ಸವನ್ನು ಆಚರಿಸುತ್ತಿದೆ.

300x250 AD
Share This
300x250 AD
300x250 AD
300x250 AD
Back to top