Slide
Slide
Slide
previous arrow
next arrow

ಅರಬೈಲ್ ಗ್ರಾಮ ಸುತ್ತುತ್ತಿರುವ ಮಾನಸಿಕ ಅಸ್ವಸ್ಥ:ಸುರಕ್ಷಿತ ಸ್ಥಳದ ವ್ಯವಸ್ಥೆ ಕಲ್ಪಿಸಲು ಆಗ್ರಹ

300x250 AD

ಯಲ್ಲಾಪುರ: ಕಳೆದ ಒಂದು ತಿಂಗಳಿನಿಂದ ಆರಬೈಲ್ ಗ್ರಾಮದಲ್ಲಿ 35ರಿಂದ 40 ವರ್ಷದ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ಅರೆನಗ್ನನಾಗಿ ಗ್ರಾಮವನ್ನು ಸುತ್ತುತ್ತಿದ್ದಾನೆ.

ಹಿಂದಿ ಮತ್ತು ಬಂಗಾಳಿ ಭಾಷೆಯನ್ನು ಮಾತನಾಡುತ್ತಾನೆ ಎಂದು ಹೇಳಲಾದ ವ್ಯಕ್ತಿ ಕಳೆದ ಒಂದು ತಿಂಗಳಿನಿಂದ ಅರಬೈಲ್ ಗ್ರಾಮದ ಬಸ್ ನಿಲ್ದಾಣದಲ್ಲಿ ವಾಸ್ತವ್ಯ ಮಾಡಿದ್ದಾನೆ . ಸ್ಥಳೀಯರು ಆತನಿಗೆ ಬಟ್ಟೆಯನ್ನು ನೀಡಿದರು ಕೂಡ ಅದನ್ನು ಧರಿಸದೆ ಕೇವಲ ಶರ್ಟ್ ಒಂದನ್ನೇ ಧರಿಸಿ ಪ್ಯಾಂಟನ್ನು ಹಾಗೆ ಕಳಚಿ ಗ್ರಾಮದ ಮೂಲೆ ಮೂಲೆಯಲ್ಲಿ ಸುತ್ತುತ್ತಿದ್ದಾನೆ. ಅರಬೈಲ್‌ದಿಂದ ಶಿರ್ಲೆ ಫಾಲ್ಸ್ ಕ್ರಾಸ್, ಗುಳ್ಳಾಪುರದವರೆಗೂ ಕಾಲ್ನಡಿಗೆಯಲ್ಲಿ ಓಡಾಡಿಕೊಂಡಿದ್ದಾಗಿ ಸ್ಥಳೀಯರು ಹೇಳುತ್ತಾರೆ. ಅರಬೈಲ್‌ದಿಂದ ಸುಮಾರು ನಾಲ್ಕೈದು ಕಿಲೋಮೀಟರ್ ದೂರ ಹೋಗಿ ಬರುವ ಮಾನಸಿಕ ಅಸ್ವಸ್ಥ, ರಾತ್ರಿ ಸಮಯದಲ್ಲಿ ಅರಬೈಲ್ ಬಸ್ ಸ್ಟಾಂಡ್ ನಲ್ಲಿ ವಾಸ್ತವ್ಯ ಮಾಡುತ್ತಾನೆ. ಈತ ಮುಖ್ಯ ರಸ್ತೆಬಂದಾಗ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಚರಿಸುವ ವಾಹನಗಳಿಗೆ ಸಿಲುಕಿ ಸಾವನ್ನಪ್ಪುವ ಅವಕಾಶಗಳು ಹೆಚ್ಚಾಗಿವೆ.

ಈ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿಯವರು ತಂದು ಬೇರೆ ನಗರ ಅಥವಾ ಪಟ್ಟಣದಿಂದ ತಂದು ಇಲ್ಲಿ ಇಳಿಸಿರಬಹುದಾದ ಸಂಶಯ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಈತನ ಅವ್ಯವಸ್ಥೆ ಕಂಡು ಕೂಡ ಸ್ಥಳೀಯರು ಆಹಾರ ನೀರು ಮುಂತಾದವುಗಳನ್ನು ನೀಡುತ್ತಿದ್ದಾರೆ. ಆತ ತನ್ನ ಅವ್ಯವಸ್ಥಿತ ಆಕಾರದ ಮಧ್ಯ ಬಸ್ ಸ್ಟ್ಯಾಂಡ್‌ನಲ್ಲಿ ಬೀಡು ಬಿಟ್ಟಿರುವುದರಿಂದ ಸಾರ್ವಜನಿಕರು ಬಸ್ ಸ್ಟ್ಯಾಂಡನ್ನು ಬಳಕೆ ಮಾಡುವುದು ಕಡಿಮೆ ಮಾಡಿದ್ದಾರೆ.

300x250 AD

ಅರಬೈಲ್ ಗ್ರಾಮದಲ್ಲಿರುವ ಮಾನಸಿಕ ಅಸ್ವಸ್ಥನನ್ನ ಸಂಬಂಧಪಟ್ಟವರು ಕರೆದುಕೊಂಡು ಹೋಗಬೇಕು. ಅನಾಥಾಶ್ರಮ ಅಥವಾ ಸುರಕ್ಷಿತ ಸ್ಥಳಗಳಿಗೆ ಸೇರಿಸುವ ವ್ಯವಸ್ಥೆಯಾಗಬೇಕು. ಹೀಗೆ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಓಡಾಡಿಕೊಂಡಿದ್ದರೆ ಹೆದ್ದಾರಿಯ ಮೇಲೆ ಓಡಾಡುವ ಸಾವಿರಾರು ವಾಹನಗಳಿಂದ ಆತನಿಗೆ ಅಪಾಯವಾಗುವ ಸಾಧ್ಯತೆಯಿದೆ ಎಂದು ಆರಬೈಲ್ ನಿವಾಸಿಗಳಾದ ದೀಪಕ್ ನಾಯ್ಕ, ಮುರುಗೇಶ ಶೆಟ್ಟಿ, ವಿದ್ಯಾಧರ ನಾಯ್ಕ, ಬಾಲಕೃಷ್ಣ ನಾಯ್ಕ, ಪ್ರವೀಣ ಶೆಟ್ಟಿ ಮುಂತಾದವರ ಅಭಿಪ್ರಾಯವಾಗಿದೆ.

Share This
300x250 AD
300x250 AD
300x250 AD
Back to top