Slide
Slide
Slide
previous arrow
next arrow

ಪತ್ರಕರ್ತರು ಬಲಿಷ್ಠ ನಾಡು ಕಟ್ಟುವ ಸೇನಾನಿಗಳು:ಡಾ.ಬಸು ಬೇವಿನಗಿಡದ

300x250 AD

ದಾಂಡೇಲಿ: ಸಮಾಜದ ಕಣ್ಣುಗಳಾಗಿರುವ ಪತ್ರಕರ್ತರು ಸಹ ಒಂದು ರೀತಿಯಲ್ಲಿ ಬಲಿಷ್ಠ ನಾಡು ಕಟ್ಟುವ ಸೇನಾನಿಗಳಾಗಿದ್ದಾರೆ ಎಂದು ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ.ಬಸು ಬೇವಿನಗಿಡದ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಗರದ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪತ್ರಿಕಾ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿ ಹಾಗೂ ಸಾಹಸಿಕ ವೃತ್ತಿಯಾಗಿದೆ. ಸಮಾಜದ ಅಂಕು- ಡೊಂಕುಗಳನ್ನು ತನ್ನ ಹರಿತವಾದ ವರದಿಯ ಮೂಲಕ ತಿದ್ದುವ ಕೆಲಸವನ್ನು ಪತ್ರಕರ್ತ ಮಾಡುತ್ತಾನೆ. ಹಲವಾರು ಎಡರು ತೊಡರುಗಳ ನಡುವೆಯು ಪತ್ರಕರ್ತನ ವೃತ್ತಿ ಬದುಕು ಸಮಾಜಕ್ಕಾಗಿಯೇ ಮೀಸಲಾಗಿದೆ ಎಂದರು.

ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಮತ್ತು ಉಪಾಧ್ಯಕ್ಷೆ ಸಂಜಯ್ ನಂದ್ಯಾಳ್ಕರ್ ಭಾಗವಹಿಸಿ ಮಾತನಾಡಿ, ದಾಂಡೇಲಿಯ ಪತ್ರಕರ್ತರು ನಗರದ ಅಭಿವೃದ್ಧಿಗೆ ಕಂಕಣಬದ್ಧರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ದಾಂಡೇಲಿಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ನಗರಸಭೆಯಿಂದ ಸೂಕ್ತ ರೀತಿಯ ಜಾಗ ನೀಡುವುದಾಗಿ ಭರವಸೆ ನೀಡಿದರು.

ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ಆರ್.ಎಸ್.ಪವಾರ್, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಿ.ಗಿರಿರಾಜ ಅವರುಗಳು ಸಂದರ್ಭೋಚಿತವಾಗಿ ಮಾತನಾಡಿ ಪತ್ರಿಕಾ ದಿನಾಚರಣೆಯ ಶುಭ ಕೋರಿದರು.

300x250 AD

ಕಾರ್ಯಕ್ರಮದಲ್ಲಿ ಪತ್ರಕರ್ತ ಡಾ.ಬಿ.ಪಿ.ಮಹೇಂದ್ರಕುಮಾರ್ ಹಾಗೂ ರುದ್ರಭೂಮಿಯ ಕಾವಲುಗಾರ ವೀರಭದ್ರ ಹರಿಜನ ಮತ್ತು ಶ್ರಮಿಕ ತಾಯಿ ಶಾರದಾ ಕುಂಬಾರ ಅವರನ್ನು ಸನ್ಮಾನಿಸಲಾಯಿತು. ಪದೋನ್ನತಿಗೊಂಡ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆಯವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಡಾ.ಬಿ.ಪಿ.ಮಹೇಂದ್ರಕುಮಾರ್ ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಪಾಟೀಲ, ಸಂಘದ ಕಾರ್ಯಚಟುವಟಿಕೆಗಳಿಗೆ ಸರ್ವರ ಸಹಕಾರವಿರಲೆಂದು ಕೋರಿದರು.

ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ಮತ್ತು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರನ್ನು ಸ್ಥಳೀಯ ಬಿಜೆಪಿ ಘಟಕದ ವತಿಯಿಂದ, ಇನ್ನಿತರ ಸಂಘ- ಸಂಸ್ಥೆಗಳಿಂದ ಸನ್ಮಾನಿಸಲಾಯಿತು. ಬಿ.ಎನ್.ವಾಸರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನಿತರನ್ನು ರಾಜೇಶ ತಳೇಕರ, ಪ್ರವೀಣಕುಮಾರ್ ಸುಲಾಖೆ, ಅಕ್ಷಯ್ ಗೋಸಾವಿ ಪರಿಚಯಿಸಿದರು. ಸಂದೇಶ್ ಎಸ್.ಜೈನ್ ವಂದಿಸಿದರು. ಯು.ಎಸ್.ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಪತ್ರಕರ್ತರ ಸಂಘದ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ಉಪಸ್ಥಿತರಿದ್ದರು

Share This
300x250 AD
300x250 AD
300x250 AD
Back to top