ಕುಮಟಾ: ಕೊಂಕಣ ಎಜ್ಯುಕೇಷನ್ ಟ್ರಸ್ಟ್ನ ಬಿ. ಕೆ. ಭಂಡಾರಕರ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಅಮೋಘ ಸಾಧನೆಗೈದಿದ್ದಾರೆ.
ವಿಜ್ಞಾನ ವಿಭಾಗದ ಒಟ್ಟೂ 121 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು 600 ಕ್ಕೆ 600 ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 15 ಬಾಲಕಿಯರು ಹಾಗೂ ಒಬ್ಬ ಬಾಲಕ ಪೂರ್ಣ ಅಂಕ ಪಡೆದು ಸಾಧನೆಗೈದಿದ್ದಾರೆ. ಅಭಿಜ್ಞಾ ಆರ್. ಕಲಭಾಗ, ಅನನ್ಯ ಎನ್., ಅಪೂರ್ವ ಶಾನಭಾಗ, ಸಿ.ವ್ಹಿ. ನಮ್ರತಾ, ಜಿ. ಆರ್. ಸಂಪ್ರೀತಿ, ಗ್ರೀಷ್ಮಾ ಪಾಂಡುರಂಗ, ನಾಗಾಂಜಲಿ ಪಿ. ನಾಯ್ಕ, ನಂದಿನಿ ಪೈ, ನಿಧಿ ಗಜನ್ಕರ್, ಪೂರ್ಣೀಮಾ ಎಂ. ಪಟಗಾರ, ಸಂಪದಾ ಪಾವಸ್ಕರ, ಶ್ರೇಯಾ ಶಾನಭಾಗ, ತೇಜೇಸ್ವಿನಿ ಶಾನಭಾಗ, ವರ್ಷಿತಾ ಪಟಗಾರ, ವಸುಧಾ ಪ್ರಭು, ವಿನಾಯಕ ಸಿ. ಗೌಡ ಸೇರಿದಂತೆ 38 ವಿದ್ಯಾರ್ಥಿಗಳು ಶೇ. 95ಕ್ಕೂ ಹೆಚ್ಚು ಅಂಕ ಪಡೆದರೆ, 29 ವಿದ್ಯಾರ್ಥಿಗಳು ಶೇ. 90ಕ್ಕೂ ಹೆಚ್ಚು ಅಂಕಗಳಿಸಿದ್ದು, ಶೇ. 85 ಕ್ಕಿಂತ ಹೆಚ್ಚು ಅಂಕಗಳನ್ನು 15 ವಿದ್ಯಾರ್ಥಿಗಳು ಪಡೆದಿದ್ದಾರೆ. 11 ವಿದ್ಯಾರ್ಥಿಗಳು 80 ಶೇ. ಹಾಗೂ 12 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಈ ಬಾರಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಯು ನಡೆದರೆ ಉತ್ತಮ ಫಲಿತಾಂಶ ನೀಡಲು ಸಕಲ ರೀತಿಯಲ್ಲೂ ಸಿದ್ಧತೆ ನಡೆಸಿ ರಾಜ್ಯಮಟ್ಟದಲ್ಲಿ ದಾಖಲೆಯ ಫಲಿತಾಂಶ ನೀಡಲು ಉತ್ಸಾಹದಿಂದ ಸಜ್ಜಾಗಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ರದ್ದಾಗಿದ್ದ ವಿಷಯ ಬೇಸರವನ್ನುಂಟು ಮಾಡಿತ್ತು. ಈ ದಿಶೆಯಲ್ಲಿ ಕೊಂಕಣದೊಂದಗಿಗೆ ವಿದಾತ್ರಿ ಅಕಾಡೆಮಿಯ ಸರ್ವ ಉಪನ್ಯಾಸಕರು ಅವಿರತ ಪ್ರಯತ್ನ ಮಾಡುವುದರೊಂದಿಗೆ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ನೀಡಿದ್ದರು. ಈ ಫಲಿತಾಂಶ ಸಂಸ್ಥೆಗೆ ಸಮಾಧಾನವನ್ನು ತಂದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳನ್ನು ಅಣಿಗೊಳಿಸುವಲ್ಲಿ ನಿರತವಾಗಿದೆ.
ಕೊರೊನಾ ಸೊಂಕಿನ ಆತಂಕದ ನಡುವೆಯೂ ಕೊಂಕಣ ಎಜುಕೇಷನ್ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಸಾಧನೆಗೆ ಕೊಂಕಣ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷರು ಹಾಗೂ ಸಕಲ ವಿಶ್ವಸ್ಥರು, ವಿಧಾತ್ರಿ ಅಕಾಡೆಮಿ ಮತ್ತು ವ್ಯವಸ್ಥಾಪಕ ಗುರುರಾಜ ಶೇಟ್ಟಿ, ಪ್ರಾಚಾರ್ಯ ಮಹೇಶ ಉಪ್ಪಿನವರು ಹಾಗೂ ಕೊಂಕಣದ ಸಕಲ ಉಪನ್ಯಾಸಕ ವೃಂದದವರು, ಮುಖ್ಯಾಧ್ಯಾಪಕರುಗಳು, ಶಿಕ್ಷಕರು ಹಾಗೂ ಬೋಧಕೇತರ ಹರ್ಷ ವ್ಯಕ್ತಪಡಿಸಿದ್ದಾರೆ.