ಶಿರಸಿ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಡುವ ಶಿರಸಿಯ ಅರಣ್ಯ ಮಹಾವಿದ್ಯಾಲಯದ 2021-22ನೇ ಸಾಲಿನ ಎರಡನೇ ಸೆಮಿಸ್ಟರ್ ಬಿ.ಎಸ್ಸಿ ((Hons) Forsrry ವಿದ್ಯಾರ್ಥಿಗಳಿಗೆ ಬೋಧಿಸಲು ಅರೆಕಾಲಿಕ ಉಪನ್ಯಾಸಕರ ತಾತ್ಕಾಲಿಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ಟಾಟಿಸ್ಟಿಕಲ್ ಮೆಥೆಡ್ಸ್ ಆಂಡ್ ಎಕ್ಸ್‌ಪಿರಿಮೆಂಟಲ್ ಡಿಸೈನ್ಸ್, ಎಲಿಮೆಂಟ್ರಿ ಮೆಥಮೆಟಿಕ್ಸ್, ಗ್ರಾಮೀಣ ಸಮಾಜಶಾಸ್ತ್ರ ಮತ್ತು ಭಾರತೀಯ ಸಂವಿಧಾನ ಈ ವಿಷಯಗಳಿಗೆ 179 ದಿನಗಳ ತಾತ್ಕಾಲಿಕ ತಲಾ ಒಂದು ಉಪನ್ಯಸಕ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಕೃಷಿ ವಿಶ್ವವಿದ್ಯಾಲಯದಿಂದ ನಿಗದಿಪಡಿಸಿದಂತೆ ತರಗತಿಯೊಂದಕ್ಕೆ 2000 ರೂ ಗಳಂತೆ ತಿಂಗಳಿಗೆ ಒಟ್ಟೂ 40,000 ಮೀರದಂತೆ ಗೌರವ ಧನ ನೀಡಲಾಗುವುದು. ಹುದ್ದೆಗೆ ಅನುಸಾರ ವಿದ್ಯಾರ್ಹತೆ ಹೊಂದಿದವರಿಗೆ ಮೊದಲ ಆದ್ಯತೆಯಿದೆ. ಆಸ್ತಕರು ಶಿರಸಿಯ ಅರಣ್ಯ ಮಹಾವಿದ್ಯಾಲಯದ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿ ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲ ಮೂಲ ದಾಖಲೆಗಳೊಂದಿಗೆ ಜುಲೈ 27ರಂದು ಸಲ್ಲಿಸಿದ ನಂತರ ಬೆಳಿಗ್ಗೆ 11ಕ್ಕೆ ನಡೆಯುವ ಸಂದರ್ಶಕ್ಕೆ ಎಲ್ಲ ಮೂಲ ದಾಖಲಾತಿಗಳ 2 ಧೃಡಿಕೃತ ಪ್ರತಿಗಳೊಂದಿಗೆ ಹಾಜರಾಗಬೇಕು. ಅರ್ಜಿಯನ್ನು ಮುಂಗಡವಾಗಿ ಕಳುಹಿಸಲು ಅವಕಾಶವಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ: 08384-226146ಗೆ ಸಂಪರ್ಕಿಸಬಹುದು ಎಂದು ಶಿರಸಿಯ ಅರಣ್ಯ ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.