Slide
Slide
Slide
previous arrow
next arrow

ದ್ವಿತೀಯ ಪಿಯು ಫಲಿತಾಂಶ ಪ್ರಕಟ; ಹುಲೇಕಲ್ ಕಾಲೇಜು ನೂರರಷ್ಟು ಫಲಿತಾಂಶ

ಶಿರಸಿ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿನ ಹುಲೇಕಲ್‍ನ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಒಟ್ಟೂ 71 ವಿದ್ಯಾರ್ಥಿಗಳಲ್ಲಿ 71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 45 ವಿದ್ಯಾರ್ಥಿಗಳು ಪ್ರಥಮ ದರ್ಜೆ, 14 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಿಂದ ಒಟ್ಟೂ ಹಾಜರಾದವರು 39 ವಿದ್ಯಾರ್ಥಿಗಳು, ಡಿಸ್ಟಿಂಕ್ಷನ್ 04, ಪ್ರಥಮ ದರ್ಜೆ 23, ದ್ವಿತೀಯ ದರ್ಜೆ 12 ಒಟ್ಟೂ 39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪ್ರತಿಶತ 100% ರಷ್ಟಾಗಿದೆ. ಪೂಜಾ ವಿ ದೇವಾಡಿಗ 584[97.33%] ಅಂಕ ಪಡೆದು ಕಲಾ ವಿಭಾಗದಲ್ಲಿ ಪ್ರಥಮಳಾಗಿರುತ್ತಾಳೆ. ಅರ್ಪಿತಾ ಆರ್. ನಾಯ್ಕ 532 [ 88.67% ] ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿ ಹಾಗೂ ರಂಜಿತಾ ಕೆ. ಗೌಡ 513 [85.50% ] ಅಂಕ ಪಡೆದು ತೃತೀಯ ಸ್ಥಾನ ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಿಂದ ಒಟ್ಟೂ ಹಾಜರಾದವರು 32 ವಿದ್ಯಾರ್ಥಿಗಳಲ್ಲಿ 8 ಡಿಸ್ಟಿಂಕ್ಷನ್, 22 ಪ್ರಥಮ ದರ್ಜೇ, 2 ದ್ವಿತೀಯ ದರ್ಜೆ ಒಟ್ಟೂ 32 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪ್ರತಿಶತ 100% ರಷ್ಟಾಗಿದೆ. ನಾಗೇಂದ್ರ ಆರ್. ಹೆಗಡೆ 597 [99.5%] ಅಂಕ ಪಡೆದು ವಿದ್ಯಾಲಯಕ್ಕೆ ಮತ್ತು ವಾಣಿಜ್ಯ ವಿಭಾಗಕ್ಕೆ ಪ್ರಥಮನಾಗಿದ್ದಾನೆ. ಕಾವ್ಯಾ ಎನ್. ಭಟ್ಟ 581 [96.83%] ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿ ಮತ್ತು ರಮ್ಯಾ ಎಲ್. ಹೆಗಡೆ 575 [95.83%] ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಭಾಗ್ಯಶ್ರೀ ಎನ್. ಭಟ್ಟ, ಮಾಲಾಶ್ರೀ ಕೆ. ಮರಾಠಿ, ಅಭಿಷೇಕ ಎಸ್. ಗೌಡ, ಪ್ರೀಯಾ ಆರ್. ಹೆಗಡೆ, ಸಚಿನ್ ಎಸ್. ಆಚಾರಿ, ನಿಶಾಂತ ಬಿ. ನಾಯ್ಕ, ಇಂದಿರಾ ಎಚ್. ಗೌಡ, ಕಾವ್ಯಾ ಆರ್. ಹೆಗಡೆ ಇವರುಗಳು ಕನ್ನಡ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ವಿದ್ಯಾಲಯ ಸತತ ಉತ್ತಮ ಫಲಿತಾಂಶ ನೀಡುತ್ತಾ ಬಂದಿರುವ ಬಗ್ಗೆ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಮಹಾಪೋಷಕರೂ ಆದ ಶ್ರೀ ಶ್ರೀಮತ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಸ್ವರ್ಣವಲ್ಲೀ ಮಹಾಸಂಸ್ಥಾನ, ಕಾರ್ಯಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಪೂರ್ವವಿದ್ಯಾರ್ಥಿ ಸಂಘ, ಪ್ರಾಚಾರ್ಯರು, ಉಪನ್ಯಾಸಕರು, ಹಿರಿಯ ಶಿಕ್ಷಕರು ಹಾಗೂ ಎಲ್ಲಾ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

Share This
Back to top