
ಶಿರಸಿ: ಜಿಲ್ಲೆಯಲ್ಲಿ ಜು.31 ಶನಿವಾರ 3600 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, 2ನೇ ಡೋಸ್ ಬಾಕಿಯಿರುವ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಶಿರಸಿ ತಾಲೂಕಿನಲ್ಲಿ ನಾಳೆ 700 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, ಇದನ್ನು ಯಲ್ಲಾಪುರ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನೀಡಲಾಗುತ್ತದೆ. ಇನ್ನುಳಿದಂತೆ ದಾಂಡೇಲಿಯಲ್ಲಿ 600, ಹೊನ್ನಾವರದಲ್ಲಿ 600, ಕುಮಟಾದಲ್ಲಿ 700, ಕಾರವಾರದಲ್ಲಿ 700 ನೇವಿಯಲ್ಲಿ 300 ಲಸಿಕೆ ಲಭ್ಯವಿರಲಿದೆ.