• Slide
    Slide
    Slide
    previous arrow
    next arrow
  • ಮೇ ತಿಂಗಳ ಹಾಲಿನ ಪ್ರೋತ್ಸಾಹ ಧನ ಜಮಾ; ಸುರೇಶ್ಚಂದ್ರ ಕೆಶಿನ್ಮನೆ

    ಶಿರಸಿ: ಮೇ.2021 ನೇ ಮಾಹೆಯರ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ರೂ. 5 ಪ್ರೋತ್ಸಾಹ ಧನ ಆಧಾರ ಜೋಡಣೆಯಾದ ಹಾಲು ಉತ್ಪಾದಕ ರೈತರ ಖಾತೆಗೆ ಜು.17 ರಂದು ಜಮಾ ಆಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ತಿಳಿಸಿದ್ದಾರೆ.
    ಈ ಸಂದರ್ಭದಲ್ಲಿ ಮಾತನಾಡಿದ ಅವರು ಜೂನ್ 2021 ರ ವರೆಗಿನ ಪ್ರೋತ್ಸಾಹ ಧನದ ಮಾಹಿತಿಯನ್ನು ನಮ್ಮಿಂದ ಈಗಾಗಲೇ ಕ್ಷೀರಸಿರಿ ತಂತ್ರಾಶದಲ್ಲಿ ಅಳವಡಿಸಲಾಗಿದ್ದು, ಮೇ.2021 ರ ವರೆಗೆ ಸರ್ಕಾರದಿಂದ ಅತ್ಯಂತ ತ್ವರಿತವಾಗಿ ಪ್ರೋತ್ಸಾಹಧನವನ್ನು ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಮಾಡಲಾಗಿದ್ದು, ಇದರಿಂದ ಜಿಲ್ಲೆಯ ಎಲ್ಲ ಹಾಲು ಉತ್ಪಾದಕ ರೈತರಿಗೆ ಸಹಾಯವಾಗಿದೆ ಎಂದರು. ಹಾಗೂ ಜಿಲ್ಲೆಯ ಹಾಲು ಉತ್ಪಾದಕ ರೈತರ ಪರವಾಗಿ ಸರ್ಕಾರಕ್ಕೆ ಧನ್ಯವಾದತಿಳಿಸಿದರು. ಮತ್ತು ಪ್ರೋತ್ಸಾಹಧನ ಜಮಾ ಆಗದ
    ರೈತರು ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದ್ದಾರೆ.

    Share This
    Leaderboard Ad
    Back to top