ನಮ್ಮ ಬಗ್ಗೆ

‘e – ಉತ್ತರ ಕನ್ನಡ’ ಹೆಸರೇ ಹೇಳುವಂತೆ ನಮ್ಮ-ನಿಮ್ಮ ಹೆಮ್ಮೆಯ ಜಿಲ್ಲೆಯಾದ ಉತ್ತರ ಕನ್ನಡದ ನಿತ್ಯದ ಆಗುಹೋಗುಗಳನ್ನು ನಿಮ್ಮ ಬೆರಳಿನ ತುದಿಯಲ್ಲಿ ತೋರಿಸುವ ಒಂದು ಚಿಕ್ಕ ಪ್ರಯತ್ನ.

ಯಾವುದೋ ಅನಿವಾರ್ಯ ಅಥವಾ ಜೀವನಾಧಾರ ಕಾರಣಕ್ಕಾಗಿ ಹುಟ್ಟಿದ ಮಣ್ಣನ್ನು ಬಿಟ್ಟು ಹೊರಜಗತ್ತಲ್ಲಿ ಇರುವವರಿಗೆ, ಮತ್ತೆ ಅವರ ಸ್ಥಳದ ಸುದ್ದಿ-ಸಮಾಚಾರಗಳನ್ನು ನಿಗದಿತ ಸಮಯದೊಳಗೆ ನೀಡುವ ಕೆಲಸಕ್ಕೆ ಕೈ ಹಾಕಿದ್ದೇವೆ. ಈ ಆಧುನಿಕ ಯುಗದಲ್ಲಿ ಕೆಲ ನಿಮಿಷದೊಳಗೆ ಮನುಷ್ಯನ ಜೀವನವೇ ಬದಲಾಗುವಾಗ, ಕ್ಷಣದ ವಿಷಯವೂ ತಿಳಿಯಬೇಕೆನ್ನುವ ಹಂಬಲದಿಂದ ನಾವು ಡಿಜಿಟಲ್ ರೂಪದಲ್ಲಿ ನಿಮ್ಮೆದುರಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ.

ಮೊದಲ ಪ್ರಯತ್ನವಾಗಿರುವುದರಿಂದ ಏಳು-ಬೀಳುಗಳು ಇದ್ದೇ ಇರುತ್ತದೆ. ಎದ್ದರೆ ಅದೆಂದಿಗೂ ಗರ್ವವಾಗದು. ಬದಲಾಗಿ ಬೀಳಬಹುದೆಂಬ ಆತಂಕವಿದ್ದರೂ, ಸದಾ ನಮ್ಮ ಜೊತೆಯಿರುವ ತಾವುಗಳು ನಮ್ಮನ್ನು ಕೈ ಹಿಡಿದು ನಡೆಸುವಿರೆಂಬ ಭರವಸೆಯೊಂದಿಗೆ ನಮ್ಮ ಹೆಜ್ಜೆ ನಿಮ್ಮ ಹೆಜ್ಜೆಗೆ ಜೊತೆಯಾಗುತಿದೆ. ಸದಾ ಉನ್ನತಿಯೆಡೆಗೆ ಸಾಗುತಿರುತ್ತದೆ..

‘e – ಉತ್ತರ ಕನ್ನಡ’ ಇದು ನಮ್ಮದು, ನಿಮ್ಮದು, ನಮ್ಮೆಲ್ಲರದ್ದು..
– e – ಉತ್ತರ ಕನ್ನಡ 

Share This
Back to top