• Slide
  Slide
  Slide
  previous arrow
  next arrow
 • ಜು.25ಕ್ಕೆ ಶ್ರೀ ಸ್ವರ್ಣವಲ್ಲಿಯಲ್ಲಿ ವೈದಿಕ ಚಿಂತನ ಗೋಷ್ಠಿ

  ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಜುಲೈ 25ರಂದು ಭಾನುವಾರ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 31ನೇ ಚಾತುರ್ಮಾಸ್ಯದ ಅಂಗವಾಗಿ ವೈದಿಕ ಸಮಾವೇಶ ಮತ್ತು ಚಿಂತನ ಗೋಷ್ಠಿಯನ್ನು ಆಯೋಜಿಸಲಾಗಿದೆ.
  ಅಂದು ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮಕ್ಕೆ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದಿವ್ಯಸಾನ್ನಿಧ್ಯ ನೀಡಿ ಆಶೀರ್ವಚನ ನೀಡಲಿದ್ದಾರೆ.
  ಆಸ್ಥಾನ ವಿದ್ವಾಂಸರಾದ ಭಾಲಚಂದ್ರ ಶಾಸ್ತ್ರಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುವರು. ಸಭೆಯಲ್ಲಿ ಚಂಡೀಹವನದ ಕುರಿತು ಚಿಂತನಗೋಷ್ಠಿ ನಡೆಯಲಿದೆ. ವಿದ್ವಾನ್ ಸುದರ್ಶನ ಭಟ್ಟ ಘಟ್ಟಿಕೈ ಈ ಕುರಿತು ವಿಷಯ ಮಂಡಿಸಲಿದ್ದಾರೆ. ಅನೇಕ ಹಿರಿಯ ವಿದ್ವಾಂಸರು ಈ ಗೋಷ್ಠಿಯಲ್ಲಿ ಪಾಲ್ಗೊಂಡು ಸಲಹೆ ನೀಡುವರು. ಮಧ್ಯಾಹ್ನದ ನಂತರ ವೈದಿಕ ಪರಿಷತ್ತಿನ ವಾರ್ಷಿಕ ಸಭೆ ನಡೆಯಲಿದೆ. ಈ ಸಮಾವೇಶದಲ್ಲಿ ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

  Share This
  Leaderboard Ad
  Back to top