• Slide
    Slide
    Slide
    previous arrow
    next arrow
  • ಚಪಾತಿಯೊಂದಿಗೆ ಸವಿಯಿರಿ ಟೇಸ್ಟಿಯಾದ ಪನ್ನೀರ್ ಮಸಾಲ

    ಅಡುಗೆ ಮನೆ; ಬೇಕಾಗುವ ಸಾಮಾಗ್ರಿಗಳು: ಕತ್ತರಿಸಿದ ಪನ್ನೀರ್ – 2 ಕಪ್, ಟೊಮೆಟೊ 4-5, ಶುಂಠಿ – ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಕೆಂಪು ಮೆಣಸು – 1 ಚಮಚ, ಬೆಣ್ಣೆ ಸ್ವಲ್ಪ, ಮೆಂತೆ ಪುಡಿ – ಒಂದು ಚಿಟಕಿ, ಕೆನೆ -1 ಟೇಬಲ್ ಚಮಚ, ವಿನೆಗರ್‍ನಲ್ಲಿ ನೆನೆಸಿದ ಬೀಟ್ರೂಟ್ ಹೋಳುಗಳು – 1/2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ತುಪ್ಪ,
    ಮಾಡುವ ವಿಧಾನ: ಟೊಮೆಟೋವನ್ನು 10-12 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಬೆಂದ ಟೊಮೆಟೊ ತಣ್ಣಗಾದ ಮೇಲೆ ಅದನ್ನು ನುಣ್ಣಗೆ ರುಬ್ಬಿ, ಪಕ್ಕಕ್ಕೆ ಇಡಿ.
    ಒಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಹಾಕಿ ಕರಗಲು ಬಿಡಿ, ಅದಕ್ಕೆ ಕೆಂಪು ಮೆಣಸನ್ನು ಸೇರಿಸಿ, ಬೆಣ್ಣೆ ಮತ್ತು ಮೆಣಸನ್ನು ಟೊಮೆಟೋ ಪೇಸ್ಟ್ ಗೆ ಸೇರಿಸಿ, ಕುದಿಯಲು ಇಡಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಮತ್ತು ವಿನೆಗರ್‍ನಲ್ಲಿ ನೆನೆಸಿಕೊಂಡ ಬೀಟ್ರೋಟ್ ಅನ್ನು ಸೇರಿಸಿ, ಕತ್ತರಿಸಿಕೊಂಡ ಪನ್ನೀರ್ ಅನ್ನು ಸ್ವಲ್ಪ ಹುರಿದು ಗ್ರೇವಿಗೆ ಸೇರಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೆಂತೆ ಪುಡಿ, ಕೆನೆ ಮತ್ತು ತುಪ್ಪ ಸೇರಿಸಿ, ಸ್ವಲ್ಪ ಸಮಯ ಕುದಿಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಇರುವಾಗಲೇ ಅನ್ನ ಅಥವಾ ಚಪಾತಿಯೊಂದಿಗೆ ಸವಿಯಿರಿ.

    Share This
    Leaderboard Ad
    Back to top