ಶಿರಸಿ: ಭಾರತೀಯ ಜನತಾ ಪಾರ್ಟಿಯ ಹುತ್ಗಾರಿನ ಶಕ್ತಿಕೇಂದ್ರದ ವತಿಯಿಂದ ತಾಲೂಕಿನ ಹುತ್ಗಾರಿನ ಗ್ರಾಮಪಂಚಾಯತ ಎದುರುಗಡೆ ಶಕ್ತಿ ಕೇಂದ್ರದ ಪದಾಧಿಕಾರಿಗಳು,ಕಾರ್ಯಕರ್ತರು ಸೇರಿ 9 & 11A ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ,ಅಕ್ರಮ-ಸಕ್ರಮ ಅರ್ಜಿಗಳನ್ನು ತಿರಸ್ಕರಿಸಿರುವುದನ್ನು ವಿರೋಧಿಸಿ,ಹಾಗೂ ಆಶ್ರಯ ಯೋಜನೆ ಮನೆಗಳ ಮಂಜೂರಾತಿ ಹಾಗೂ ಮನೆಗಳಿಗೆ ಹಣ ಬಿಡುಗಡೆಗೆ ಒತ್ತಾಯಿಸಿ ಮತ್ತು ಗ್ರಾಮೀಣ ಭಾಗದ ರಸ್ತೆ,ಕಾಲುವೆಗಳ ದುರಸ್ಥಿ ಮಾಡದಿರುವುದರ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಯ ನಂತರ ರಾಜ್ಯಪಾಲರಿಗೆ ಗ್ರಾಮಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ರವಿ ಹೆಗಡೆ ಹಳದೋಟ,ಶಕ್ತಿ ಕೇಂದ್ರದ ಪವನಕುಮಾರ ಹೆಗಡೆ ಹುತ್ಗಾರ್, ಅಭಿರಾಮ ಹೆಗಡೆ,ಶೋಭಾ ನಾಯ್ಕ ಗಣೇಶನಗರ , ಗಜಾನನ ಮೊಗೇರ ಹುತ್ಗಾರ್ ಹಾಗೂ ಪಂಚಾಯತದ ಸದಸ್ಯರು,ಸಾರ್ವಜನಿಕರು ಹಾಜರಿದ್ದರು.