ಶಿರಸಿ: ಇಲ್ಲಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎಸ್ಸ್ಸಿ ಅಂತಿಮ ವರ್ಷ ಓದುತ್ತಿರುವ ವಿಭಾ ವಿಜಯೇಂದ್ರ ಹೆಗಡೆ ಐಐಟಿ ಜಾಮ್ ಪರೀಕ್ಷೆಯಲ್ಲಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ 125ನೇ ರಾಂಕ್ ಅನ್ನು ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾಳೆ. ಇವಳು ಬಾಳೆಗದ್ದೆ ಶಿಂಗನಮನೆಯ ವಿಜಯೇಂದ್ರ ಹೆಗಡೆ ಹಾಗೂ ಭಾರತಿ ಹೆಗಡೆಯವರ ಪುತ್ರಿಯಾಗಿದ್ದು, ವಿದ್ಯಾರ್ಥಿನಿಯ ಈ ಸಾಧನೆಗೆ ಎಂಇಎಸ್ ನ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಎಂಇಎಸ್ ಪದಾಧಿಕಾರಿಗಳು, ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗವತ್, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊಫೆಸರ್ ಜಿ.ಟಿ.ಭಟ್, ಬೋಧಕ, ಭೋದಕೆತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಐಐಟಿ ಜಾಮ್ ಪರೀಕ್ಷೆ: ಎಂಇಎಸ್ ವಿದ್ಯಾರ್ಥಿನಿ ವಿಭಾ ಸಾಧನೆ
