ಶಿರಸಿ: ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದ ಡಾ.ಎಸ್.ಐ.ಭಟ್ ನಿಧನರಾಗಿದ್ದಾರೆ. ತನ್ನಿಮಿತ್ತ ಕಾಲೇಜಿನಲ್ಲಿ ಸಂತಾಪ ಸೂಚಿಸಿ ಸಭೆಯನ್ನು ನಡೆಸಲಾಯಿತು. ಒಂದು ನಿಮಿಷದ ಮೌನಚರಣೆ ನಡೆಸಿ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸುವ ಮೂಲಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಮೃತರು ಮಹಾವಿದ್ಯಾಲಯದಲ್ಲಿ ಸತತ 20 ವರ್ಷಗಳ ಕಾಲ ಎನ್‌ಸಿಸಿಯ ಅಧಿಕಾರಿಯಾಗಿ ಮೇಜರ್ ಪಟ್ಟವನ್ನು ಅಲಂಕರಿಸಿದ್ದರು. ಕಾಲೇಜಿನ ಪ್ರಾಚಾರ್ಯರಾಗಿ ನ್ಯಾಕ್ ಎ ಗ್ರೇಡ್ ಸಂಪಾದಿಸುವಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸಿದ್ದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು, ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್.ಕೆ.ಭಾಗವತ್, ಪ್ರಾಚಾರ್ಯ ಪ್ರೊ.ಜಿ.ಟಿ.ಭಟ್, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು ಸಂತಾಪ ಸೂಚಿಸಿದರು.
ಪ್ರಾಚಾರ್ಯ ಡಾ.ಎಸ್.ಐ. ಭಟ್ ನಿಧನ: ಶ್ರದ್ಧಾಂಜಲಿ
