Slide
Slide
Slide
previous arrow
next arrow

ಎಸ್ಎಸ್ಎಲ್‌ಸಿ: ಚಂದನಕ್ಕೆ ರಾಜ್ಯ ಮಟ್ಟದಲ್ಲಿ 3 ರ‍್ಯಾಂಕ್‌ಗಳು

300x250 AD

ಶಿರಸಿ; 2024-25 ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯೆ ಮರು ಮೌಲ್ಯ ಮಾಪನದಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆಯ ಗಣೇಶ ನಾಗರಾಜ ಭಟ್ 622 ಅಂಕ (99.52%) ಪಡೆದು ರಾಜ್ಯಕ್ಕೆ 4 ನೇ ಸ್ಥಾನ ಹಾಗೂ ಶಾಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ . ಇವನಿಗೆ ಪ್ರಥಮ ಭಾಷೆ ಇಂಗ್ಲೀಷ್ ವಿಷಯದಲ್ಲಿ 4, ತೃತೀಯ ಭಾಷೆ ಹಿಂದಿಯಲ್ಲಿ 2, ವಿಜ್ಞಾನ ಅಂಕದಲ್ಲಿ 1 ಅಂಕ ಒಟ್ಟೂ 7 ಅಂಕಗಳು ಹೆಚ್ಚು ಬಂದಿರುತ್ತವೆ. ಆದ್ಯಾ ಅಂಬರ್ 619 ಅಂಕ (99.04%) ಪಡೆದು ರಾಜ್ಯಕ್ಕೆ 7 ನೇ ಸ್ಥಾನ ಪಡೆದಿರುತ್ತಾಳೆ.ಇವಳಿಗೆ ಪ್ರಥಮ ಭಾಷೆ ಇಂಗ್ಲೀಷ್, ಗಣಿತ,ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ತಲಾ 1 ಅಂಕ ಹೆಚ್ಚು ಬಂದು ಒಟ್ಟೂ 4 ಅಂಕ ಜಾಸ್ತಿ ಬಂದಿರುತ್ತವೆ. ಖುಷಿ ರಮೇಶ ಗೌಡ 616 ಅಂಕ (98.56%) ಪಡೆದು ರಾಜ್ಯಕ್ಕೆ 10ನೇ ಸ್ಥಾನ ಪಡೆದಿರುತ್ತಾಳೆ. ಪ್ರಥಮ ಭಾಷೆ ಇಂಗ್ಲೀಷ್‌ನಲ್ಲಿ 3 ಅಂಕ ,ವಿಜ್ಞಾನ ವಿಷಯದಲ್ಲಿ 5 ಅಂಕ ಒಟ್ಟೂ 8 ಅಂಕ ಜಾಸ್ತಿ ಬಂದಿರುತ್ತವೆ. ಅದೇ ರೀತಿ ಅಮೃತಾ ಪಾಟೀಲ್ ಇವಳಿಗೆ ಹಿಂದಿ ವಿಷಯಕ್ಕೆ 3 ಅಂಕಗಳು ಜಾಸ್ತಿ ಬಂದು ಒಟ್ಟೂ 620 ಅಂಕ (99.20%) ಪಡೆದು ರಾಜ್ಯ ಮಟ್ಟದ 9ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಭಡ್ತಿ ಹೊಂದಿರುತ್ತಾಳೆ. ಮರು ಮೌಲ್ಯಮಾಪನದಲ್ಲಿ ಬಂದ 3 ರ‍್ಯಾಂಕ್‌ಗಳನ್ನು ಸೇರಿ ಒಟ್ಟೂ 9 ರಾಜ್ಯಮಟ್ಟದ ರ‍್ಯಾಂಕಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾರ್ಯದರ್ಶಿ ಎಲ್ ಎಂ ಹೆಗಡೆ ,ಅಧ್ಯಕ್ಷರಾದ
ಎಸ್ ಆರ್ ಹೆಗಡೆ , ಆಡಳಿತಾಧಿಕಾರಿ ವಿದ್ಯಾ ನಾಯ್ಕ ,ಮುಖ್ಯೋಪಾಧ್ಯಾಯರು, ಶಿಕ್ಷಕರು ,ಪಾಲಕರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top