Slide
Slide
Slide
previous arrow
next arrow

ರೋಟರಿ ಕ್ಲಬ್ ವತಿಯಿಂದ ಕೊನವೆಕ್ಸ್ ಮಿರರ್ ಉದ್ಘಾಟನೆ

300x250 AD

ಹೊನ್ನಾವರ : ರೋಟರಿ ಪಾರ್ಕ ಹೌಸ್‌ಗೆ ಹೋಗುವ ಗಾಂಧಿನಗರದ ತಿರುವಿನಲ್ಲಿ ರೋಟರಿ ಕ್ಲಬ್ ಹೊನ್ನಾವರ ಸ್ಥಾಪಿಸಿದ ಕೊನವೆಕ್ಸ್ ಮಿರರ್‌ನ್ನು ನಗರಸಭೆಯ ಮುಖ್ಯ ಅಧಿಕಾರಿ ಯೇಸು ಸುಬ್ಬಣ್ಣ  ಉದ್ಘಾಟಿಸಿದರು.

 ಇದು ಅಪಾಯಕಾರಿ ತಿರುವಾಗಿದ್ದು ಇದನ್ನು ಅಳವಡಿಸುವದರ ಮೂಲಕ ವಾಹನ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ತುಂಬಾ ಅನುಕೂಲವಾಗಲಿದೆ ಮತ್ತು ರೋಟರಿ ಕ್ಲಬ್ ಹೊನ್ನಾವರ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ನಗರಸಭೆ ಸದಸ್ಯ ಶಿವರಾಜ ಮೇಸ್ತ ಮಾತನಾಡಿ ನನ್ನ ವಿನಂತಿಯ ಮೇರೆಗೆ ರೋಟರಿ ಅಧ್ಯಕ್ಷರು ಅಳವಡಿಸಿಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದರು. ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ಕಿರಣ ಭಟ್ಟ ಮಾತನಾಡಿ ಈ ಕೊನವೆಕ್ಸ್ ಮಿರರ್ ಅಳವಡಿಕೆಯಿಂದ ಜನರ ಸಮಯ ಉಳಿತಾಯವಾಗುತ್ತಿದೆ ಮತ್ತು ಅಪಘಾತವಾಗದಂತೆ ಎಚ್ಚರವಹಿಸಬಹುದು ಎಂದು ಹೇಳಿದರು. 

300x250 AD

ರೋಟರಿ ಕ್ಲಬ್ ಅಧ್ಯಕ್ಷ ಸೂರ್ಯಕಾಂತ ಸಾರಂಗ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಗರ ಸಭೆ ಸದಸ್ಯ ತಾರಕ್ಕ, ಕೆ. ಆರ್. ಭಟ್ಟ ನಿವೃತ್ತ ಸೇನಾನಿ ಮಡಿವಾಳ ಕೆ.ಡಿ. ನಾಯ್ಕ, ರೋಟರಿ ಕ್ಲಬ್‌ನ ವಸಂತ ಕಿಮಾನಿಕರ, ವಿ.ಜಿ. ನಾಯ್ಕ, ಡಿ.ಜೆ. ನಾಯ್ಕ ಮತ್ತು ಗಾಂಧಿನಗರದ ನಿವಾಸಿಗಳು ಉಪಸ್ಥಿತರಿದ್ದರು. ಎಂ.ಎಂ. ಹೆಗಡೆ ಕಾರ್ಯದರ್ಶಿ ವಂದಿಸಿದರು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.

Share This
300x250 AD
300x250 AD
300x250 AD
Back to top