ಶಿರಸಿ: ದೇಶಾದ್ಯಂತ ಹೆಸರು ಮಾಡಿದ ಬಚಪನ್ ಶಿಕ್ಷಣ ಸಂಸ್ಥೆ ಶಿರಸಿಯಲ್ಲೂ ಕಾರ್ಯಾರಂಭ ಮಾಡಲಿದೆ. ಜಿಲ್ಲೆಯಲ್ಲೇ ಪ್ರಥಮವಾಗಿ ನಗರದ ಧುಂಡಶಿ ನಗರದಲ್ಲಿ ಜಾಗೃತಿ ಫೌಂಡೇಶನ್ ನೇತೃತ್ವದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದೆ.
ಏ.30ರಂದು ಸಂಜೆ 4.30ಕ್ಕೆ ಬಚಪನ್ ಶಾಲೆ ಉದ್ಘಾಟನೆಯಾಗಲಿದ್ದು, ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೇಕಲ ಹಾಜಬ್ಬ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಾಗೃತಿ ಫೌಂಡೇಶನ್ ಅಧ್ಯಕ್ಷ ಎಂ.ಎಂ.ಹೆಗಡೆ ಬಕ್ಕಳ ವಹಿಸಲಿದ್ದಾರೆ. ಅತಿಥಿಗಳಾಗಿ ಡಿಡಿಪಿಐ ಬಸವರಾಜ ಪಿ., ಬಿಇಓ ನಾಗರಾಜ ನಾಯ್ಕ, ರೋಟರಿ ಅಧ್ಯಕ್ಷೆ ಡಾ. ಸುಮನ್ ಹೆಗಡೆ, ಬಚಪನ್ ಸಂಸ್ಥೆಯ ತರಬೇತಿ ವಿಭಾಗದ ಜಿಎಂ ಶಾಹ್ ಅಹದ್, ಯುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಭಾಗವಹಿಸಲಿದ್ದಾರೆ ಎಂದು ಫೌಂಡೇಶನ್ ಕಾರ್ಯದರ್ಶಿ, ಸಿಎ. ಎಂ.ಎಸ್.ಶೆಟ್ಟಿ ಮತ್ತು ಟ್ರಸ್ಟಿ ಸಿಎ. ಅಂಜನಾ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.