ಶಿರಸಿ: ವಿದ್ಯಾ ಪೋಷಕ ಸಂಸ್ಥೆಯಿಂದ 2024-25 ಸಾಲಿನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಿರುವ ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಅನೇಕ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಧನಸಹಾಯ, ಪುಸ್ತಕ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡಲಾಗಿತ್ತು.
ಈ ವಿದ್ಯಾರ್ಥಿಗಳ ಪೈಕಿ 13 ಪ್ರತಿಭಾನ್ವಿತ ವಿದ್ಯಾರ್ಥಿಗಳು 2024-25 ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇಕಡ 90% ಗಿಂತ ಹೆಚ್ಚು ಅಂಕ ಪಡೆದು ಗಣನೀಯ ಸಾಧನೆ ಗೈದಿದ್ದಾರೆ . ಈ ವಿದ್ಯಾರ್ಥಿಗಳು ಕೃಷಿ ಕಾರ್ಮಿಕರು, ಮನೆಗೆಲಸ, ಕ್ಷೌರಿಕ, ಕಟ್ಟಡ ಕೆಲಸ ಮಾಡುವವರು, ಬಡಗಿತನ, ಕಮ್ಮಾರಿಕೆ, ಟೇಲರಿಂಗ್ ಮುಂತಾದ ಕೆಲಸಗಳಲ್ಲಿ ತೊಡಗಿರುವ ಕುಟುಂಬದಿಂದ ಬಂದವರಾಗಿದ್ದಾರೆ.
ಅನೇಕ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಉದಾರ ದಾನಿಗಳು ವಿದ್ಯಾ ಪೋಷಕ ಸಂಸ್ಥೆಯ ನೀಡಿದ ಸಹಾಯವನ್ನು ಸದುಪಯೋಗಪಡಿಸಿಕೊಂಡು ಕಷ್ಟಕರ ಪರಿಸ್ಥಿತಿಗಳಲ್ಲು ಸಾಧನೆಗೈದ ಈ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಆಡಳಿತ ಮಂಡಳಿ, ಉದಾರ ದಾನಿಗಳು, ಸಂಸ್ಥೆಯ ಸ್ವಯಂಸೇವಕರ ಮತ್ತು ಹಿತೈಷಿಗಳ ಪರವಾಗಿ ಹೃದಯಪೂರ್ವಕ ಅಭಿನಂದನೆಗಳು.
ನೀವು ಸಹ ಇಂತಹ ಹಲವು ಪ್ರತಿಭೆಗಳನ್ನು ಪೋಷಿಸುವಲ್ಲಿ ಭಾಗಿಯಾಗಬಹುದು ಹೆಚ್ಚಿನ ಮಾಹಿತಿಗಾಗಿ ನಮ್ಮ ಸಂಸ್ಥೆಯ ವೆಬ್ಸೈಟ್ಗೆ ಸಂಪರ್ಕಿಸಬಹುದು. http://www.vidyaposhak.ngo