ಶಿರಸಿ: ಇಲ್ಲಿನ ಪ್ರಜ್ವಲ ಟ್ರಸ್ಟ್ ಒಂದು ತಿಂಗಳ ಬ್ಯುಟೀಶಿಯನ್ ತರಬೇತಿಯನ್ನು ಆಯೋಜಿಸಿದ್ದು, ಏ.7ರಂದು ತರಬೇತಿಗೆ ಚಾಲನೆ ನೀಡಲಾಯಿತು.
ಲಯನ್ ರಮಾ ಪಟವರ್ಧನ್ ತರಬೇತಿಯನ್ನು ಉದ್ಘಾಟಿಸಿ, ಯಾವುದೇ ವಿದ್ಯೆಯ ಕಲಿಕೆಗೆ ಶ್ರದ್ಧೆ, ಪ್ರೀತಿ, ಗೌರವ ಇದ್ದರೆ ಏನನ್ನಾದರೂ ಕಲಿತು ಸಾಧಿಸಬಹುದು ಎಂದರು. ತರಬೇತುದಾರರಾಗಿ ಆಗಮಿಸಿದ ಬ್ಯೂಟಿಶಿಯನ್ ಸ್ನೇಹಾ ಬಾಕಳೆ, ಪ್ರಜ್ವಲ ಟ್ರಸ್ಟಿನ ಇಂತಹ ಕಾರ್ಯ ಶ್ಲಾಘನೀಯ. ಎಲ್ಲರೂ ಚೆನ್ನಾಗಿ ಕಲಿತು ಯಶಸ್ವಿಯಾಗಿರೆಂದು ಹಾರೈಸಿದರು. ಪ್ರಜ್ವಲ್ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಖಜಾಂಚಿ ನಯನಾ ಹೆಗಡೆ ವಂದಿಸಿದರು.