ಶಿರಸಿ: ಪ್ರಗತಿನಗರದ ಮಹಿಳಾ ಪತಂಜಲಿ ಯೋಗ ಸಮಿತಿಯ ಯೋಗ ತರಬೇತಿ ಕೇಂದ್ರದಲ್ಲಿ ರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಭು ಶ್ರೀರಾಮಚಂದ್ರನಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು. ಪಾನಕ, ಕೋಸಂಬರಿ, ಸಿಹಿತಿಂಡಿ ನೈವೇದ್ಯ ಮಾಡಲಾಯಿತು. ಸಮಿತಿಯ ಯೋಗಬಂಧುಗಳಿಂದ ಭಜನೆ, ರಾಮರಕ್ಷಾ ಸ್ತೋತ್ರ, ರಾಮಜಪ ನಡೆದವು. ಯೋಗ ಶಿಕ್ಷಕಿ ಮಂಗಲಾ ಹಬ್ಬು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಸಂಭ್ರಮದ ರಾಮನವಮಿ ಆಚರಣೆ
