Slide
Slide
Slide
previous arrow
next arrow

ಏಪ್ರಿಲ್ ತಿಂಗಳೊಳಗೆ ಆಸ್ತಿ ತೆರಿಗೆ ಪಾವತಿಸಿದ್ದಲ್ಲಿ ಶೇ.5ರಷ್ಟು ರಿಯಾಯಿತಿ : ವಿವೇಕ ಬನ್ನೆ

300x250 AD

ದಾಂಡೇಲಿ : 2025 – 26 ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ತಿಂಗಳೊಳಗೆ ಪಾವತಿಸಿದ್ದಲ್ಲಿ ಶೇ.5% ರಷ್ಟು ರಿಯಾಯಿತಿ ಸೌಲಭ್ಯವನ್ನು ಪಡೆಯಲು ಅವಕಾಶವಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ನಗರಸಭೆಯ ಪೌರಾಯುಕ್ತರಾದ ವಿವೇಕ ಬನ್ನೆ ವಿನಂತಿಸಿದ್ದಾರೆ.

ಅವರು ಶುಕ್ರವಾರ ನಗರಸಭೆಯಲ್ಲಿ ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ಮನವಿಯನ್ನು ಮಾಡಿದ್ದಾರೆ. 2024 – 25 ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸುವಲ್ಲಿ ನಗರದ ಸಾರ್ವಜನಿಕರು ನಗರಸಭೆಯ ಜೊತೆ ಕೈಜೋಡಿಸಿರುವುದು ಸಂತಸ ತಂದಿದೆ ಎಂದರು. ಅದೇ ರೀತಿ ಈ ವರ್ಷವೂ ಆಸ್ತಿ ತೆರಿಗೆಯನ್ನು ಎಲ್ಲರೂ ಸಕಾಲದಲ್ಲಿ ಪಾವತಿಸುವಂತೆ ವಿನಂತಿಸಿದ್ದು, ಶೇ. ನೂರಕ್ಕೆ ನೂರು ಆಸ್ತಿ ತೆರಿಗೆಯನ್ನು ಈ ತಿಂಗಳೊಳಗೆ ಪಾವತಿಸಿ ಶೇ.5% ರಷ್ಟು ರಿಯಾಯಿತಿ ಪಡೆಯಲು ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು.

300x250 AD
Share This
300x250 AD
300x250 AD
300x250 AD
Back to top