ಶಿರಸಿ: ಅನಧಿಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂಬ ಪರಿಸರವಾದಿಗಳು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯು ಸುಪ್ರೀಂ ಕೋರ್ಟಿನಲ್ಲಿ ಏಪ್ರೀಲ್ ೨ ರಂದು ಮುಂದಿನ ವಿಚಾರಣೆ ನಿಗದಿಗೊಳಿಸಿದ್ದು, ನ್ಯಾಯಾಲಯದಲ್ಲಿ ಅಂದು ವಿಚಾರಣೆ ಜರುಗಲಿದ್ದಲ್ಲಿ ಹೋರಾಟಗರರ ವೇದಿಕೆಯು ಅರಣ್ಯ ಭೂಮಿ ಹಕ್ಕಿನ ದಾಖಲೆಯ ಸ್ಪಷ್ಟೀಕರಣಕ್ಕೆ ವಾದ ಮಂಡಿಸಲಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿ, ಅರಣ್ಯೀಕರಣ ಮಾಡಬೇಕೇಂದು ದೇಶದ ಏಂಟು ಪರಿಸರ ಸಂಘಟನೆಗಳು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ೨೦೦೮ ರಲ್ಲಿ ದಾಖಲಿಸಿದ್ದು, ಹೋರಾಟಗಾರರ ವೇದಿಕೆಯು ಸ್ವಪ್ರೇರಣೆ ಮೇರೆಗೆ ಅರಣ್ಯವಸಿಗಳ ಪರವಾಗಿ ಈ ಪ್ರಕರಣದಲ್ಲಿ ಅವಶ್ಯ ಎದ್ರುದಾರನಾಗಿ ಸೆಪ್ಟೆಂಬರ, ೨೦೧೯ ರಂದು ಸೇರ್ಪಡೆಗೊಂಡಿತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾರಂಪರಿಕ ಅರಣ್ಯವಾಸಿಗಳಿಗೆ ಮೂರು ತಲೆಮಾರಿನ ವಯಕ್ತಿಕ ದಾಖಲೆಗಳನ್ನ ಕಾನೂನಿಗೆ ವ್ಯತಿರಿಕ್ತವಾಗಿ ಹಾಗೂ ಕಾನೂನನ್ನ ಅಪಾರ್ಥವಾಗಿ ಅರ್ಥೈಸುವಿಕೆಯಿಂದ ಕರ್ನಾಟಕದಲ್ಲಿ ಪಾರಮಪರಿಕ ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗಿರುವುದರಿಂದ ಸುಪ್ರೀಮ ಕೋರ್ಟನಲ್ಲಿ ದಾಖಲೆಗಳ ಕುರಿತು ಸ್ಪಷ್ಟೀಕರಣಕ್ಕೆ ಪರಿಹಾರ ಪಡೆಯಲು ಬಯಸಿದ್ದೇವೆಂದು ಅವರು ಹೇಳಿದರು.
ಕಾನೂನಿನ ಅಂಶ:
ವಯಕ್ತಿಕ ದಾಖಲೆ ಒತ್ತಾಯಿಸತ್ತಕ್ಕದ್ದಲ್ಲ ಎಂಬುವುದನ್ನು ಅರಣ್ಯ ಹಕ್ಕು ಕಾಯಿದೆ ಮತ್ತು ಕೇಂದ್ರ ಬುಡಕಟ್ಟು ಮಂತ್ರಾಲಯ ಸ್ಪಷ್ಟವಾಗಿ ಉಲ್ಲೇಖಿಸಿದ್ದಾಗಲೂ ರಾಜ್ಯದಲ್ಲಿ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ವಿರುದ್ಧ ಹಕ್ಕು ಸಮಿತಿಗಳು ಆದೇಶ ನೀಡುತ್ತಿರುವ ಕುರಿತು ದಾಖಲೆಗಳನ್ನ ಸುಪ್ರೀಂ ಕೋರ್ಟನ ವಿಚಾರಣೆ ಸಂದರ್ಭದಲ್ಲಿ ಹಾಜರಪಡಿಸಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು.