ದಾಂಡೇಲಿ : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿ ನಗರದ ಸೋಮಾನಿ ವೃತ್ತದಲ್ಲಿ ಬಿಜೆಪಿ ಮಂಡಲದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಡಿ.ಕೆ. ಶಿವಕುಮಾರ್ ಅವರ ಪ್ರತಿಕೃತಿಯನ್ನು ದಹಿಸಿ, ರಾಜಿನಾಮೆಗೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಳದ ಅಧ್ಯಕ್ಷರಾದ ಬುದವಂತಗೌಡ ಪಾಟೀಲ್, ಬಿಜೆಪಿ ನಿಕಟ ಪೂರ್ವ ಅಧ್ಯಕ್ಷರಾದ ರೋಷನ್ ನೇತ್ರಾವಳಿ ಮತ್ತು ಸುಧಾಕರ ರೆಡ್ಡಿ ಅವರು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಸಂವಿಧಾನ ವಿರೋಧಿಯಾಗಿದ್ದು, ಡಾ. ಬಿ.ಆರ್. ಅಂಬೇಡ್ಕರ್ ರವನ್ನು ತುಳಿಯುತ್ತಲೇ ಬಂದಿದೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸವಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಸ್ಪಲ್ಪನಾದರೂ ಗೌರವಿದ್ದರೇ ಡಿ.ಕೆ. ಶಿವಕುಮಾರ್ ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು. ದೇಶದ ಜನರಲ್ಲಿ ಕ್ಷಮೆಯಾಚನೆ ಮಾಡಬೇಕು. ಇವರು ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಿವಾದ ಸೃಷ್ಠಿಯಾಗುತ್ತಿದೆ. ಕಾಂಗ್ರೆಸ್ ಪಕ್ಷ ದೇಶ ವಿರೋಧಿಗಳ ಜೊತೆ ಕೈಜೋಡಿಸಿದ್ದು, ದೇಶದಲ್ಲಿ ಅಭದ್ರತೆ ಸೃಷ್ಠಿಯಾಗುತ್ತಿದೆ. ಜೈ ಬೀಮ್ ಎನ್ನುವ ಕಾಂಗ್ರೆಸ್ ಮುಖವಾಡ ಕಳಚಿಬಿದ್ದಿದೆ. ಅಂಬೇಡ್ಕರ್ ಕಸನು ಕಂಡಿದ್ದ ಅಖಂಡ ರಾಷ್ಟ್ರವನ್ನು ಛಿದ್ರಗೊಳಿಸುವ ಸಂಚನ್ನು ಕಾಂಗ್ರೆಸ್ ರೂಪಿಸುತ್ತಿದೆ. ಜಾತಿ ಹಾಗೂ ಧರ್ಮಗಳಲ್ಲಿ ವಿಷ ಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ್ ಟೊಸೂರ್ ಮತ್ತು ಮಿಥುನ ನಾಯಕ, ನಗರಸಭೆಯ ಬಿಜೆಪಿ ಸದಸ್ಯರುಗಳಾದ ದಶರಥ ಬಂಡಿವಡ್ಡರ, ವಿಷ್ಣು ವಾಜ್ವೆ, ರೋಷನ್ ಜಿತ್, ವಿಜಯ ಕೊಲೇಕರ್, ಪದ್ಮಜಾ ಜನ್ನು, ಅಂಬಿಕಾ ನ್ರ ಗ್ರಾ.ಪಂ ಅಧ್ಯಕ್ಷೆ ಮೇಘಾ ಗೌಡ, ಪಕ್ಷದ ಮುಖಂಡರುಗಳಾದ ವಾಮನ ಮಿರಾಶಿ, ಹನುಮಂತ ಕಾರ್ಗಿ, ಸುಭಾಷ್ ಅರವೇಕರ, ವಿಷ್ಣು ನಾಯರ್, ಪ್ರಶಾಂತ ಬಸೂರ್ತೆಕರ್, ಲಕ್ಷ್ಮೀ ಕಿಲಾರಿ, ಅನ್ನಪೂರ್ಣ ಬಾಗಲಕೋಟ, ಮಾರತಿ ಕಾಮರೆಕರ್, ರವಿ ವಾಟ್ಲೇಕರ್, ವಿಷ್ಣು ಧಾರವಾಡಕರ, ಏಕನಾಥ ವಾಟ್ಲೇಕರ್, ಚನ್ನಬಸಪ್ಪ ಮುರಗೋಡ, ಈರಯ್ಯಾ ಸಾಲಿಮಠ, ಪುನೀತ್ ನಾಯಕ, ಜ್ಯೋತಿ ತುಳಸೇಕರ್, ಮಂಜುನಾಥ ಶಟ್ಟಿ, ಪ್ರಮೋದ್ ಕದಂ, ಅರ್ಜುನ ಮಾನೆ, ಹಾಗೂ ಪಕ್ಷದ ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು.