ಶಿರಸಿ: ಯಕ್ಷಾಂಕುರ ಐನಬೈಲ್ (ರಿ) ಶಿರಸಿ ಇವರು ಕಳೆದ 19 ವರ್ಷಗಳಿಂದ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ಶಿಬಿರವನ್ನು ನಡೆಸಿಕೊಂಡು ಬಂದಿರುತ್ತಾರೆ. ಪ್ರಸ್ತುತ 20 ನೇ ವರ್ಷದ ಶಿಬಿರವನ್ನು ದಿನಾಂಕ 30-03-2025 ರಿಂದ 09-04-2025 ರವರೆಗೆ ನಡೆಯಬೇಕಾಗಿದ್ದ ತರಬೇತಿ ಶಿಬಿರವನ್ನು ಅನಿವಾರ್ಯ ಕಾರಣದಿಂದಾಗಿ ಮುಂದೂಡಿ ಏ. 21 ರಿಂದ ಮೇ.1ರವರೆಗೆ ನಡೆಸಲು ನಿರ್ಧರಿಸುತ್ತಾರೆ. ಶಿಬಿರವು ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 10 ದಿನಗಳ ಕಾಲ ನಡೆಯುತ್ತದೆ. 8 ರಿಂದ 18 ವರ್ಷದ ಗಂಡು ಅಥವಾ ಹೆಣ್ಣು ಮಕ್ಕಳು ಭಾಗವಹಿಸಬಹುದು. ಪರಮೇಶ್ವರ ಹೆಗಡೆ ಐನಬೈಲ್ ಇವರು ಯಕ್ಷಗಾನ ತರಬೇತಿಯನ್ನು ನೀಡಲಿದ್ದಾರೆ. ಶಂಕರ ನಾಗರಕಟ್ಟೆ, 1 ನೇ ಕ್ರಾಸ್, ಕೆ.ಎಚ್.ಬಿ.ಕಾಲನಿ ಶಿರಸಿ ಇವರ ಮನೆಯ ಮಹಡಿಯ ಮೇಲೆ ನಡೆಯುತ್ತದೆ. ಶಿಬಿರದ ಕೊನೆಯ ದಿನಾಂಕ 01-05-2025 ರಂದು ಗುರುವಾರ ಟಿ.ಎಂ.ಎಸ್. ಸಭಾಭವನದಲ್ಲಿ ಶಿಬಿರದ ಮಕ್ಕಳಿಂದ ಯಕ್ಷಗಾನ ಪ್ರದರ್ಶನವಿರುತ್ತದೆ. ಆಸಕ್ತ ಮಕ್ಕಳ ಹೆಸರನ್ನು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರಿಗೆ ಕರೆಮಾಡಬಹುದು.
ಪರಮೇಶ್ವರ ಹೆಗಡೆ ಐನಬೈಲ್-Tel:+919480018915
ಸುರೇಶ ಹೆಗಡೆ ಶಿರಸಿ-Tel:+919242919300
ನಾಗೇಂದ್ರ ಭಟ್ಟ ಸಂಕದಗುಂಡಿ-Tel:+919731977906
ಮಕ್ಕಳ ಯಕ್ಷಗಾನ ತರಬೇತಿ ಶಿಬಿರ ಮುಂದೂಡಿಕೆ
