ಶಿರಸಿ: ನಗರದ ಲಿಂಗದಕೋಣ ರಸ್ತೆಯಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಶಿರಸಿ ನಗರ ಠಾಣೆ ಪೋಲಿಸರು ಬಂಧಿಸಿದ್ದಾರೆ.
ಹರೀಶ್ ಮಂಜುನಾಥ ನಾಯ್ಕ ಎಂಬಾತನನ್ನು ಮಾದಕ ವಸ್ತು ಸೇವನೆಗೆ ಸಂಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಆತ ಗಾಂಜಾ ಸೇವಿಸಿದ್ದನೆಂದು ಧೃಡಪಟ್ಟಿದ್ದು, ಶಿರಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ.
ಶಿರಸಿ ಉಪವಿಭಾಗದ ಡಿಎಸ್ಪಿ ಗಣೇಶ ಕೆ.ಎಲ್, ವೃತ್ತ ನಿರೀಕ್ಷಕರಾದ ಶ್ರೀಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ ಬಿ.ಹಾಗೂ ಸಿಬ್ಬಂದಿಗಳಾದ ನಾರಾಯಣ ರಾಥೋಡ ಎಎಸ್ಐ, ಹನುಮಂತ ಕಬಾಡಿ,ಸದ್ದಾಂ ಹುಸೇನ್, ಮಲ್ಲಿಕಾರ್ಜುನ ಕುದರಿ, ಚನ್ನಬಸಪ್ಪ ಕ್ಯಾರಕಟ್ಟಿ,
ಶಿವಲಿಂಗ ತುಪ್ಪದ, ಪ್ರವೀಣ್ ಎನ್, ರಾಜಶೇಖರ ಅಂಗಡಿ, ಪಾಲ್ಗೊಂಡಿದ್ದರು.