ಯಲ್ಲಾಪುರ: ತೋಟಗಾರಿಕಾ ಇಲಾಖೆ,ಜಿ.ಪಂ., ಶ್ರೀದೇವಿ ರೈತ ಉತ್ಪಾದಕ ಕಂಪನಿ ಕಳಚೆ,ರಾಷ್ಟ್ರೀಯ ಜೇನು ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಮಾ. ೨೨ ಮತ್ತು ೨೩ ರಂದು ತಾಪಂ ಸಭಾಭವನದಲ್ಲಿ ವೈಜ್ಞಾನಿಕ ಜೇನು ಬೇಸಾಯ ಕುರಿತು ಜಿಲ್ಲಾಮಟ್ಟದ ಕಾರ್ಯಾಗಾರ ನಡೆಯಲಿದೆ.
ಮಾ.೨೨ ರಂದು ಬೆಳಿಗ್ಗೆ ೧೦.೩೦ ಕ್ಕೆ ಕಾರ್ಯಾಗಾರ ಉದ್ಘಾಟನೆ ನಡೆಯಲಿದ್ದು,ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆ ವಹಿಸಲಿದ್ದಾರೆ. ಗಣ್ಯರು,ಅಧಿಕಾರಿಗಳು ಭಾಗವಹಿಸುತ್ತಾರೆ. ನಂತರ ಕಾರ್ಯಾಗಾರ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಕೆ.ಟಿ. ವಿಜಯಕುಮಾರ, ಜವರೇಗೌಡ,ರೂಪಾ ಪಾಟೀಲ್, ಗಾಯತ್ರಿ ಬಡಿಗೇರ,ಶ್ರೇಯಾ ಭಟ್ಕಳ,ಮಧುಕೇಶ್ವರ ಹೆಗಡೆ,ಪರಮೇಶ್ವರ ಗಾಂವ್ಕಾರ,ಗಣಪತಿ ನಾಯ್ಕ, ವಿಶ್ವೇಶ್ವರ ಭಟ್ಟ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಿದ್ದಾರೆ.