ಯಲ್ಲಾಪುರ: ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕ, ಮೈತ್ರಿ ಕಲಾ ಬಳಗ ಇವರ ಆಶ್ರಯದಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಭವನದಲ್ಲಿ ಮಾ. ೨೨ ರಂದು ಬೆಳಿಗ್ಗೆ ೧೦ ಕ್ಕೆ ನಾಟಕಕಾರ ಟಿ.ವಿ. ಕೋಮಾರ ಅವರ ‘ಕ್ಷಮಾದಾನ’ ಮತ್ತು ‘ಹಿತಶತ್ರುಗಳು’ ಮಕ್ಕಳ ನಾಟಕಗಳ ಕೃತಿ ಲೋಕಾರ್ಪಣೆ ನಡೆಯಲಿದೆ.
ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಸಾಪ ತಾಲೂಕಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಪ್ರಮೋದ ಹೆಗಡೆ, ಹರಿಪ್ರಕಾಶ ಕೋಣೆಮನೆ ಕೃತಿ ಬಿಡುಗಡೆ ಗೊಳಿಸಲಿದ್ದಾರೆ. ಕೃತಿಕಾರ ಟಿ ವಿ ಕೋಮಾರ,ಪ್ರಾಂಶುಪಾಲ ಆರ್.ಡಿ. ಜನಾರ್ಧನ,ಪ್ರಮುಖರಾದ ಬೀರಣ್ಣ ಮೊಗಟಾ,ಎನ್. ಕೆ.ಭಟ್ಟ,ಉಮೇಶ ಭಾಗ್ವತ್,ಜಿ.ವಿ. ಭಟ್ಟ ಉಪಾಧ್ಯ, ಶಶಾಂಕ ಹೆಗಡೆ ಶೀಗೆಹಳ್ಳಿ ಭಾಗವಹಿಸಲಿದ್ದಾರೆ.