ಶಿರಸಿ: ಇತ್ತೀಚಿನ ಬದಲಾವಣೆಯಿಂದಾಗಿ ಎಲ್.ಐ.ಸಿ. ಪ್ರತಿನಿಧಿಗಳಿಗೆ ಅಂತೆಯೇ ಪಾಲಿಸಿದಾರರಿಗೆ ಹಾನಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಮಾರ್ಚ್ 19ರಂದು ಅಖಿಲ ಭಾರತ ಲಿಯಾಫಿ ಮಹಾಮಂಡಲವು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಭಗೀರಥ ಧರಣಿಯನ್ನು ಏರ್ಪಡಿಸಿತ್ತು. ಜಿಲ್ಲೆಯಿಂದ ಅನೇಕರು ದೆಹಲಿಗೆ ಹೋಗಿದ್ದು, ಅದರಲ್ಲಿ ಪಾಲ್ಗೊಳ್ಳಲಾಗದ ಪ್ರತಿನಿಧಿಗಳು ಎಲ್.ಐ.ಸಿ. ಶಾಖಾ ಮಟ್ಟದಲ್ಲಿ ಒಂದು ದಿನದ ಪ್ರತಿಭಟನೆ ಕೈಗೊಂಡಿದ್ದು ಎಲ್.ಐ.ಸಿ.ಯ ಎಲ್ಲ ರೀತಿಯ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿತ್ತು.
ಶಿರಸಿಯಲ್ಲೂ ಎಲ್.ಐ.ಸಿ.ಪ್ರತಿನಿಧಿಗಳ ಹಾಗೂ ಪಾಲಿಸಿದಾರರ ಪರವಾಗಿ ವಿವಿಧ ಬೇಡಿಕೆಗಳನ್ನು ಘೋಷಣೆಯ ರೂಪದಲ್ಲಿ ಕೂಗಲಾಯಿತು. ಲಿಯಾಫಿ ಶಿರಸಿಯ ಅಧ್ಯಕ್ಷರಾದ ಐ. ದತ್ತಾತ್ರೇಯ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಅಧ್ಯಕ್ಷ ಆರ್.ವಿ. ಹೆಗಡೆ ಬಾಳೆಗದ್ದೆ, ಕಾರ್ಯಕಾರಿಣಿ ಸಾವಿತ್ರಿ ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ರವಿ ಗಡಿಹಳ್ಳಿ ಮುಂತಾದವರು ಮಾತನಾಡಿದರು. ಪದಾಧಿಕಾರಿಗಳು ಹಾಗೂ ಸದಸ್ಯರು ಘೋಷಣೆ ಕೂಗಿದರು. ಮಾಜಿ ಅಧ್ಯಕ್ಷರುಗಳಾದ ಜಿ.ವಿ. ಹೆಗಡೆ ಬಿಸಲಕೊಪ್ಪ, ಬಸಪ್ಪ ದೇವರಿ, ವಿ.ಕೆ. ಹೆಗಡೆ ಹಾಗೂ ಹಿರಿಯ ಪ್ರತಿನಿಧಿಗಳಾದ ಪಿ.ಟಿ. ಹೆಗಡೆ, ನವೀನ ತೇಲಂಗ, ಅನಿಲ ನಾಯಕ, ಶ್ರೀಮತಿ ಚಂದ್ರಕಲಾ ನಾಯಕ, ಶ್ರೀಮತಿ ಶ್ರೀಮತಿ ಹೆಗಡೆ, ಮೂರ್ತಿ ಕೊಡಿಯಾ, ವಿಜಯೇಂದ್ರ ಮುಂತಾದವರು ಉಪಸ್ಥಿತರಿದ್ದರು. ಶಿರಸಿಗಾಗಮಿಸಿದ್ದ ಕಾರವಾರ ಲಿಯಾಫಿ ಅಧ್ಯಕ್ಷರಾದ ದೀಪಕ ಕುಡಾಲ್ಕರ್ ಮಾತನಾಡಿ, ಘೋಷಣೆ ಕೂಗಿದರು. ಕಾರ್ಯದರ್ಶಿ ನಿಕ್ಸನ್ ಡಿ’ಕೋಸ್ತಾ ವಂದಿಸಿದರು.
LIC ಶಿರಸಿ ಲಿಯಾಫಿ ಪ್ರತಿಭಟನೆ ಯಶಸ್ವಿ
