ಹೊನ್ನಾವರ: ಓಂಕಾರ ಸಂಜೀವಿನಿ ಒಕ್ಕೂಟ ಹಾಗೂ ಗ್ರಾಮ ಪಂಚಾಯಿತಿ ಉಪ್ಪೋಣಿ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಸಾಧನಾ ಬರ್ಗಿ ಉದ್ಘಾಟಿಸಿ ತಮ್ಮ ಮಾತಿನಲ್ಲಿ ಜಗತ್ತಿನ ಶ್ರೇಷ್ಠ, ಪೂಜ್ಯ, ಅನರ್ಘ್ಯ ಸೃಷ್ಟಿಯೇ ಈ ಮಹಿಳೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆ ಶಿಖರವನ್ನು ಮುಟ್ಟುತ್ತಿದ್ದಾಳೆ. ಅತಿಥಿಗಳಾದ ಬಾಲಚಂದ್ರ ನಾಯ್ಕ್ ಒಕ್ಕೂಟದ ತಾಲೂಕ ಮೇಲ್ವಿಚಾರಕರು ಮಹಿಳೆಯರಿಗೆ ಸಿಗುವ ಸೌಲಭ್ಯ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ನಾಯ್ಕ್ ರವರು ಹೆಣ್ಣು ಜಾಗೃತರಾದರೆ ಸಮಾಜ ಜಾಗೃತವಾಗುತ್ತದೆ ಎಂದು ನುಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಸಂತೋಷ್ ನಾಯ್ಕ, ಪಿಡಿಓ ರಾಘು ಮೇಸ್ತ, ಓಂಕಾರ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ರಾಧಾ ನಾಯ್ಕ ಕಾರ್ಯದರ್ಶಿ ಸಂಧ್ಯಾಗಾಬಿತ, ವಿವೇದ ಸ್ಪರ್ಧೆಯಲ್ಲಿ ವಿಜೇತರದ ಮಹಿಳೆಯರಿಗೆ ಬಹುಮಾನ ವಿತರಣೆ ಮಾಡಲಾಯಿತು. ಎಂ. ಬಿ. ಕೆ. ವನಿತ ಗೌಡ ಕಾರ್ಯಕ್ರಮ ನಿರ್ವಹಿಸಿ ಸರ್ವರನ್ನು ವಂದಿಸಿದರು.