ಹೊನ್ನಾವರ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜರುಗುತ್ತಿರುವ ಅರಣ್ಯವಾಸಿಗಳಿಗೆ ಕಾನೂನು ಜಾಗೃತಾ ಜಾಥಾ-೨೦೨೫ ರ ಅಂಗವಾಗಿ ಹೊನ್ನಾವರ ತಾಲೂಕಿನಲ್ಲಿ ಮಾ.೨೩ ರವಿವಾರದಂದು ಸಾಲ್ಕೋಡ, ಚಂದಾವರ, ಜಲವಳ್ಳಿ ಮತ್ತು ಮುಗ್ವಾ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಕಾನೂನು ಜಾಗೃತಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕರಾದ ರಾಮ ಮರಾಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಮುಂಜಾನೆ ೯-೩೦ ಕ್ಕೆ ಸಾಲ್ಕೋಡ ಗ್ರಾಮಪಂಚಾಯತಿ ವ್ಯಾಪ್ತಿಯ ಸಭೆಯನ್ನು ಗ್ರಾಮಪಂಚಾಯತಿ ಸಂಭಾಗಣದಲ್ಲಿ, ಚಂದಾವರ ಗ್ರಾಮಪಂಚಾಯತಿ ವ್ಯಾಪ್ತಿಯ ಸಭೆಯನ್ನು ಮಧ್ನಾಹ್ನ ೧೧-೩೦ ಕ್ಕೆ ಹನುಮಂತ ದೇವರ ಸಂಭಾಗಣದಲ್ಲಿ, ಜಲವಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಸಭೆಯನ್ನು ಮಧ್ಯಾಹ್ನ ೩-೦೦ ಗಂಟೆಗೆ ಗ್ರಾಮಪಂಚಾಯತಿ ಸಭಾಭವನದಲ್ಲಿ ಹಾಗೂ ಮುಗ್ವಾ ಗ್ರಾಮಪಂಚಾಯತಿ ಸಭೆಯನ್ನ ಸಾಯಕಾಲ ೫ ಗಂಟೆಗೆ ಆರೊಳ್ಳಿ ಚರ್ಚ ಕ್ರಾಸ್ ಹತ್ತಿರ ಜರುಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯವಾಸಿಗಳ ಜಾಗೃತಾ ಕಾರ್ಯಕ್ರಮದಲ್ಲಿ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ ನೀಡಲಿದ್ದು, ಆಸಕ್ತರು ಆಗಮಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.