ಹೊನ್ನಾವರ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಹೊನ್ನಾವರ ಮಹಿಳೆಯರಿಗಾಗಿ ಉಚಿತ ರಕ್ತ ತಪಾಸಣೆಯನ್ನು ಆಯೋಜಿಸಿತ್ತು. ಆರ್.ಬಿ.ಎಸ್, ಹಿಮೋಗ್ಲೋಬಿನ್ ಮತ್ತು ಥೈರೈಡ ತಪಾಸಣೆಯನ್ನು ಉಚಿತವಾಗಿ ರಮೇಶ ಟಿ. ಎಸ್. ಅವರ ಮುಂದಾಳತ್ವದಲ್ಲಿ ನಡೆಸಲಾಯಿತು. ಮಧ್ಯಾಹ್ನ ಮಹಿಳೆಯರಿಗಾಗಿ ಸಲಾಡ್ ಮಾಡುವ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು. ಅರ್ಪಿತಾ ಎಸ್. ತಾಂಡೇಲ್ ಪ್ರಥಮ ಸ್ಥಾನವನ್ನು, ದ್ವಿತೀಯ ಸ್ಥಾನವನ್ನು ಮಮತಾ ಎ. ನಾಯ್ಕ ಮತ್ತು ತೃತೀಯ ಸ್ಥಾನವನ್ನು ಅಮಿತಾ ಎಂ. ನಾಯ್ಕ ಪಡೆದರು. ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಡಾ|| ಅನುರಾಧಾ ನಾಯ್ಕ ಬಹುಮಾನ ವಿತರಿಸಿ ಮಾತನಾಡುತ್ತಾ ಮಹಿಳಾ ದಿನಾಚರಣೆಯ ಮಹತ್ವ ತಿಳಿಸಿದರು. ಕಾರ್ಯಕ್ರಮ ಸಂಯೋಜಕಿ ರೋ.ಡಾ|| ಮಂಜುಳಾ ಯುವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ಣಾಯಕರಾಗಿ ರೊ. ಡಾ|| ಪ್ರತಿಭಾ ಬಳ್ಕೂರ ಮತ್ತು ರೋ. ಸುಮಿತ್ರಾ ಕೌಶಿಕ್ ಸ್ವಾಗತಿಸಿದರು. ಕಾರ್ಯದರ್ಶಿ ಎಂ. ಎಂ. ಹೆಗಡೆ ವಂದಿಸಿದರು. ದಿನೇಶ ಕಾಮತ ಕಾರ್ಯಕ್ರಮ ನಿರೂಪಿಸಿದರು.
ಮಹಿಳಾ ದಿನಾಚರಣೆ ನಿಮಿತ್ತ ರಕ್ತ ತಪಾಸಣಾ ಶಿಬಿರ
