ಬನವಾಸಿ: ಹೋಳಿ ಹಬ್ಬ ಹಾಗೂ ರಂಜಾನ್ ಮಾಸದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಾನೂನು ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ತಡೆಯಲು ಮುಂಜಾಗೃತಾ ಕ್ರಮವಾಗಿ ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐಗಳಾದ ಚಂದ್ರಕಲಾ ಪತ್ತಾರ ಹಾಗೂ ಸುನೀಲ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ಇಲ್ಲಿಯ ಪ್ರಮುಖ ರಸ್ತೆಯಲ್ಲಿ ಸೋಮವಾರ ಪಥ ಸಂಚಲನ ನಡೆಸಲಾಯಿತು.
ಪೊಲೀಸ್ ಠಾಣೆಯಿಂದ ಸಂತೆ ಪೇಟೆ, ರಥ ಬೀದಿ, ಮಧುಕೇಶ್ವರ ದೇವಾಲಯ, ಮಾರ್ಕೆಟ್ ರಸ್ತೆ, ಕದಂಬ ವೃತ್ತ, ಶಿರಸಿ ರಸ್ತೆಯಲ್ಲಿ ಪಥ ಸಂಚಲನ ನಡೆಸಿ ಛತ್ರಪತಿ ಶಿವಾಜಿ ವೃತ್ತದಲ್ಲಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಎಎಸ್ಐಗಳಾದ ಮಣಿಮಾಲನ್, ಗಜಾನನ ನಾಗೇಕರ್ ಮತ್ತು ಬನವಾಸಿ ಠಾಣೆಯ ಆರಕ್ಷಕ ಸಿಬ್ಬಂದಿ ಇದ್ದರು.