Slide
Slide
Slide
previous arrow
next arrow

‘ಕಾಮನಬಿಲ್ಲು’ ಮಕ್ಕಳ ಬೇಸಿಗೆ ಶಿಬಿರಕ್ಕೆ ಅರ್ಜಿ ಆಹ್ವಾನ

300x250 AD

ಶಿರಸಿ : ಇಲ್ಲಿನ ರವಿವರ್ಮ ಸ್ಕೂಲ್ ಆಫ್ ಆರ್ಟ್ ಹಾಗೂ ಅಸ್ಮಿತೆ ಫೌಂಡೇಷನ್ ಇವರ ಸಹಭಾಗಿತ್ವದಲ್ಲಿ 6 ವರ್ಷದಿಂದ 16 ವರ್ಷದ ಒಳಗಿನ ಮಕ್ಕಳಿಗೆ “ಕಾಮನಬಿಲ್ಲು” ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಿದೆ. 

ಶಿಬಿರವು ಮಾರ್ಚ್ 30 ರಿಂದ ಏಪ್ರಿಲ್ 5ರ ವರೆಗೆ ಸಮಯ ಬೆಳಿಗ್ಗೆ 9.30 ರಿಂದ 12.30 ವರೆಗೆ ನಗರದ ನೆಮ್ಮದಿ ಕುಟೀರದಲ್ಲಿ ನಡೆಯಲಿದ್ದು ಶಿಬಿರದಲ್ಲಿ ಮಕ್ಕಳಿಗೆ ಜಲವರ್ಣ ಕಲಾಕೃತಿಗಳ ರಚನೆ, ಕರಕುಶಲ ಕಲೆ, ದಾರದಲ್ಲಿ ಚಿತ್ರ ರಚನೆ, ವ್ಯಂಗ್ಯ ಚಿತ್ರ ರಚನೆ, ವೈವಿದ್ಯಮಯ ಆಟಗಳು, ಸದೃಢ ಅರೋಗ್ಯಕ್ಕಾಗಿ ಯೋಗ, ಪಾಟ್ ಪೇಂಟಿಂಗ್ಸ್, ಬುಡಕಟ್ಟು ಚಿತ್ರಕಲಾ ಪ್ರಕಾರಗಳು ಸೇರಿದಂತೆ ಮುಂತಾದ ವೈವಿದ್ಯಮಯ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವೃತ್ತಿಪರ ಚಿತ್ರ ಕಲಾವಿದ ಹಾಗೂ ಅಂತರಾಷ್ಟ್ರೀಯ ಚಿತ್ರಕಲಾ ತರಬೇತಿದಾರರಾಗದ  ವೆಂಕಟಾಚಲ.ಎಂ, ರಾಜ್ಯ ಕರಕುಶಲ ಪ್ರಶಸ್ತಿ ವಿಜೇತರಾದ ರೇಖಾ ಭಟ್, ಪ್ರಸಿದ್ಧ ಹಿರಿಯ ಚಿತ್ರಕಲಾವಿದರಾದ ನೀರ್ನಳ್ಳಿ ಗಣಪತಿ,  ಪ್ರಸಿದ್ಧ ವ್ಯಂಗ್ಯ ಚಿತ್ರಕಲಾವಿದರಾದ  ಜಿ.ಎಂ.ಬೊಮ್ನಳ್ಳಿ ಪ್ರತಿದಿನ ಮಕ್ಕಳಿಗೆ ಶಿಬಿರದಲ್ಲಿ ತರಬೇತಿ ನೀಡುವರು. 

ಪ್ರತಿದಿನ ಚಟುವಟಿಕೆಗಳಲ್ಲಿ  ಅತ್ಯುತ್ತಮವಾಗಿ ಭಾಗಿಯಾದ ವಿದ್ಯಾರ್ಥಿಗಳಿಗೆ ಬಹುಮಾನಗಳು, ಶಿಬಿರದ ಕೊನೆಯಲ್ಲಿ ಪ್ರಮಾಣ ಪತ್ರಗಳ ವಿತರಣೆ ಮಾಡಲಾಗುವುದು. ಆಸಕ್ತ ಮಕ್ಕಳು ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 25.03.2025. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಸ್ಮಿತೆ ಫೌಂಡೇಶನ್, ಗುರುಕೃಪಾ ನಿಲಯ ಬಿಲ್ಡಿಂಗ್ ಯಲ್ಲಾಪುರ ನಾಕಾ ಹತ್ತಿರ, ಶಿರಸಿ ಇಲ್ಲಿ ಹಾಗೂ ವೆಂಕಟಾಚಲ ಎಂ ಅವರ ದೂರವಾಣಿ ಸಂಖ್ಯೆ Tel:+919483692660Tel:+917019924576 ಹಾಗೂ ಅಸ್ಮಿತೆ ಫೌಂಡೇಶನ್ ದೂರವಾಣಿ ಸಂಖ್ಯೆ Tel:+916361657873 ಗೆ ಸಂಪರ್ಕಿಸಬಹುದಾಗಿದೆ ಎಂದು ಡಾ. ರಿಯಾಜ್ ಸಾಗರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top