ಸಿದ್ದಾಪುರ: ಹೊಸದುರ್ಗದ ಹುಳಿಯಾರು ವೃತ್ತದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವರಿಗೆ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಮಾ. 6 ಗುರುವಾರದಂದು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಮೂಲಮೃತ್ತಿಕ ಬೃಂದಾವನ ಸೇವಾ ಸಮಿತಿ ವತಿಯಿಂದ ರಜತ ಕವಚ ಸಮರ್ಪಣಾ ಕಾರ್ಯಕ್ರಮ ಜರುಗಿತು.
ಅಂದು ಬೆಳಿಗ್ಗೆ 5 ಗಂಟೆಗೆ ಶಿಲಾ ಮೂರ್ತಿಗಳಿಗೆ ನಿರ್ಮಲ್ಯ ಅಭಿಷೇಕ,ಪಂಚಾಮೃತ ಅಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಬೆಳಿಗ್ಗೆ 8.30 ಗಂಟೆಗೆ ರಜತ ಕವಚ ಧಾರಣೆ,9ಕ್ಕೆ ಪೂರ್ಣಾಹುತಿ, 12:30 ಗಂಟೆಗೆ ಮಹಾಮಂಗಳಾರತಿ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯ ಜರುಗಿತು.2,000ಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿ ಶ್ರೀ ದೇವರ ರಜತಾಲಂಕಾರದ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿದರು.ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಮಂಜುನಾಥ್ ದಿವಾಕರ್ ಈ ಉತ್ಸವದ ಕುರಿತು ವಿವರಿಸಿ ಮಾತನಾಡಿ,ಭಕ್ತರಿಂದ 1.68 ಲಕ್ಷ ನಗದು ಹಾಗೂ 2.1 ಕೆಜಿ ಬೆಳ್ಳಿ ಸಂಗ್ರಹವಾಗಿದ್ದು ಉಳಿದಂತೆ ಸಮಿತಿಯ ಹಣದಿಂದ ಒಟ್ಟು 11ಕೆಜಿ ಬೆಳ್ಳಿಯಿಂದ ಎರಡು ದೇವರಿಗೂ ಸಹ ಏಕಶಿಲಾ ಕವಚವನ್ನು ನಿರ್ಮಿಸಿದ್ದು ಈ ರಜತ ಕವಚವನ್ನು ಸಿದ್ದಾಪುರದ ಸುವರ್ಣ ಮತ್ತು ರಜತಶಿಲ್ಪಿ ಪ್ರಶಾಂತ ಡಿ.ಶೇಟವಿನ್ಯಾಸಗೊಳಿಸಿದ್ದಾರೆ.ಈ ಸಂದರ್ಭದಲ್ಲಿ ಕಮಿಟಿಯ ಖಜಾಂಚಿ ಎಚ್. ಎಮ್. ನೀಲಕಂಠಯ್ಯ,ಉಪಾಧ್ಯಕ್ಷ ಟಿ.ಎ.ಮಾರುತಿ, ಗೋಪಾಲ ಲಾಡ್, ಕಾರ್ಯದರ್ಶಿ ಎಸ್.ಪಿ. ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಮಾರುತಿ ಜಿ. ರೇವಣಕರ್,ಪ್ರಧಾನ ಅರ್ಚಕ ಕೃಷ್ಣಾಚಾರ್, ಸಹಾಯಕ ಅರ್ಚಕ ಶ್ರೀನಿವಾಸ್ ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಿತು.