ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಜಿ ಪ್ಲಸ್ ಟು ಆಶ್ರಯ ಮನೆಯ ಹತ್ತಿರ ಅತಿಕ್ರಮಿಸಲ್ಪಟ್ಟ ಖಾಲಿ ಜಾಗವನ್ನು ನಗರಸಭೆಯು ಶನಿವಾರ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.
ನಗರಸಭೆಯ ಪೌರಾಯಕ್ತರಾದ ವಿವೇಕ್ ಬನ್ನೆ ಅವರ ಮಾರ್ಗದರ್ಶನದಲ್ಲಿ ನಗರಸಭೆಯ ವ್ಯವಸ್ಥಾಪಕರಾದ ಪರಶುರಾಮ ಶಿಂದೆ, ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಾಗೇಂದ್ರ ದೊಡ್ಡಮನಿ, ನಗರಸಭೆಯ ಅಧಿಕಾರಿ ಶುಭಂ ರಾಯ್ಕರ್ ಅವರ ನೇತೃತ್ವದಲ್ಲಿ ಪೌರಕಾರ್ಮಿಕರು ಅತಿಕ್ರಮಿತ ಜಾಗವನ್ನು ತೆರವುಗೊಳಿಸಿದರು.