ದಾಂಡೇಲಿ : ನಗರದ ಪಾಟೀಲ್ ಆಸ್ಪತ್ರೆಯಲ್ಲಿ ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ಆಶ್ರಯದಡಿ ಮಾರ್ಚ್:8ರಂದು ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಪವಿತ್ರಾ ಶ್ಯಾಮ್ ಸುಂದರ್ ಹಾಗೂ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ತಾಲ್ಲೂಕು ಸೇರಿದಂತೆ ಸುತ್ತಮುತ್ತಲ ಸಾರ್ವಜನಿಕರು ಭಾಗವಹಿಸಿ ಶಿಬಿರದ ಲಾಭವನ್ನು ಪಡೆದುಕೊಳ್ಳುವಂತೆ ನಗರದ ಪಾಟೀಲ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮೋಹನ್ ಪಾಟೀಲ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಶಿಬಿರದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದಲ್ಲಿ, ಅನೇಕ ಬಾರಿ ಗರ್ಭಪಾತವಾಗಿದ್ದರೆ, ಅನೇಕ ಐಯುಐ ಅಥವಾ ಐವಿಎಫ್ ವೈಫಲ್ಯತೆ ಹೊಂದಿದ್ದರೆ, ವರದಿಗಳು ಸಾಮಾನ್ಯವಾಗಿದ್ದರೂ ಗರ್ಭ ಧರಿಸಲು ಅಸಾಧ್ಯವಾಗಿದ್ದರೆ, ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದು ಅಥವಾ ವೀರ್ಯಾಣು ಇಲ್ಲದೆ ಇರುವುದು, ಪಿಸಿಒಎಸ್ ಸಮಸ್ಯೆ, ಫೆಲೋಪಿಯನ್ ನಾಳದಲ್ಲಿ ಅಡಚಣೆ, ಎಂಡೋಮೀಟ್ರಿಯಸಿಸ್ ಅಥವಾ ಗರ್ಭಶಯದ ಫೈ ಬ್ರಾಯ್ಡ್ ನಂತಹ ಸಮಸ್ಯೆ ಇದ್ದವರು, ಈ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ಡಾ. ಮೋಹನ ಪಾಟೀಲ್ ತಿಳಿಸಿದ್ದಾರೆ.