ಸಿದ್ದಾಪುರ: ತಾಲ್ಲೂಕಿನ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರನ ಮಹಾರಥೋತ್ಸವ ಮತ್ತು ಅನ್ನ ಸಂತರ್ಪಣೆ ಮಾ.8 ಶನಿವಾರ ನಡೆಯಲಿದೆ.
ಪುರಾಣ ಕಾಲದ ಇತಿಹಾಸ ಇರುವ ಶ್ರೀಕ್ಷೇತ್ರ ಇಟಗಿಯಲ್ಲಿ ವಾರ್ಷಿಕ ಮಹಾರಥೋತ್ಸವ ಬಹಳ ವಿಜೃಂಭಣೆಯಿಂದ ನಡೆದುಕೊಂಡು ಬಂದಿದೆ.
ಅದೇ ರೀತಿ 2025 ನೇ ಇಸವಿಯ ಮಹಾರಥೋತ್ಸವ ಮಾರ್ಚ್ 8 ರಂದು ನಡೆಯಲಿದೆ. ಇಂದು ಮಾರ್ಚ್ 7 ಶುಕ್ರವಾರ ಬೆಳಿಗ್ಗೆ ಬ್ರಹ್ಮಕಲಶೋತ್ಸವ ಅದೇ ದಿನ ರಾತ್ರಿ ಪುಷ್ಪರಥೋತ್ಸವ. ಹಾಗೂ ಮಾರ್ಚ್ 8 ಶನಿವಾರ ಬೆಳಿಗ್ಗೆ ರಥಾರೋಹಣ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ ಮಹಾರಥೋತ್ಸವ ನಡೆಯಲಿದೆ. ಈ ಬಾರಿ ಮಹಾರಥೋತ್ಸವದಲ್ಲಿ ಆಗಮಿಸಿದ ಎಲ್ಲ ಭಕ್ತರಿಗೂ ರಥದ ಮೇಲೆ ವಿರಾಜಮಾನನಾದ ಶ್ರೀ ರಾಮೇಶ್ವರನ ದರ್ಶನ ಮಾಡಲು ಸುಲಭವಾಗಿ ಹತ್ತಿ ಇಳಿಯುವ ಏಣಿಯ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.