Slide
Slide
Slide
previous arrow
next arrow

ಶಿರಸಿ ಎ.ಆರ್. ವಿರುದ್ಧ ಧರಣಿ: ಎ.ಸಿ. ಉಪಸ್ಥಿತಿಯಲ್ಲಿ ಮುಕ್ತಾಯ: ಸರ್ಕಾರಕ್ಕೆ ದೂರು ಸಲ್ಲಿಸಿದ ಸರಸ್ವತಿ ಎನ್. ರವಿ

300x250 AD

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಚುನಾವಣಾ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿದ ಬಗ್ಗೆ ಆಕ್ಷೇಪಿಸಿ ಚುನಾವಣಾಧಿಕಾರಿಯಾಗಿದ್ದ ಶಿರಸಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ (ಎ.ಆರ್) ಅಜೀತ್ ಶಿರಹಟ್ಟಿ ರವರ ವಿರುದ್ಧ ಕೈಗೊಂಡಿದ್ದ ಧರಣಿಯ ಸ್ಥಳಕ್ಕೆ ರಾತ್ರಿ 10 ಗಂಟೆ ಸುಮಾರಿಗೆ ಆಗಮಿಸಿದ ಸಹಾಯಕ ಆಯುಕ್ತರು ಹಾಗೂ ವಿಭಾಗೀಯ ದಂಡಾಧಿಕಾರಿಗಳೂ ಆದ ಕಾವ್ಯಾರಾಣಿಯವರು ನೀಡಿದ ಸಲಹೆ ಹಾಗೂ ಭರವಸೆಯ ಮೇರೆಗೆ ಧರಣಿಯನ್ನು ಹಿಂಪಡೆದಿದ್ದೇನೆ ಎಂದು ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ನಿರ್ದೇಶಕಿ ಸರಸ್ವತಿ ಎನ್. ರವಿ ಹೇಳಿದ್ದಾರೆ.
ನಾನು ಯಾವುದೇ ರಾಜಕೀಯ ಪಕ್ಷ ಅಥವಾ ಗುಂಪುಗಳ ಪ್ರತಿನಿಧಿಯಲ್ಲ. ಸಹಕಾರಿ ಕ್ಷೇತ್ರದ ಮಹತ್ವ ಹಾಗೂ ಅದಕ್ಕಿರುವ ಗೌರವವನ್ನು ತಿಳಿದುಕೊಂಡೇ ಕಳೆದ 10 ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದೇನೆ. ನನಗೆ ಸಹಕಾರಿ ಕ್ಷೇತ್ರ ಹಾಗೂ ಸಹಕಾರಿ ಸಂಘ-ಸಂಸ್ಥೆಗಳ ಹಿತ ಕಾಪಾಡುವುದೇ ಮುಖ್ಯ ವಿನಃ ಗುಂಪುಗಾರಿಕೆ ಮಾಡುವ, ಸಹಕಾರಿಗಳನ್ನು ಹತ್ತಿಕ್ಕುವ, ಅಸಹಾಯಕ ಸಹಕಾರಿ ಸಂಸ್ಥೆಗಳಿಗೆ ಆಮಿಷವೊಡ್ಡಿ ಅವರ ಪರಿಸ್ಥಿತಿಗಳನ್ನು ದುರುಪಯೋಗ ಮಾಡಿಕೊಳ್ಳುವ, ಸಹಕಾರಿಗಳ ಮಧ್ಯೆ ಒಡಕು ಉಂಟು ಮಾಡಿ ಲಾಭ ಪಡೆಯುವ, ಚುನಾವಣಾಧಿಕಾರಿಗಳ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವ, ಫೋರ್ಜರಿ ದಾಖಲೆ ಸೃಷ್ಟಿಸಿ ಅಕ್ರಮವೆಸಗುವ, ನಿಯಮಬಾಹಿರ ಪ್ರಕರಣಗಳನ್ನು ಮುಚ್ಚಿ ಹಾಕುವ, ಹಿರಿಯ ಸಹಕಾರಿಗಳ ಘನತೆ ಗೌರವಗಳಿಗೆ ಮಸಿ ಬಳಿಯುವ ತಂತ್ರಗಾರಿಕೆ ನನ್ನದಲ್ಲ. ನನಗೆ ಸಹಕಾರಿ ಕ್ಷೇತ್ರವನ್ನು ಹೊಟ್ಟೆಪಾಡನ್ನಾಗಿ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಒಕ್ಕೂಟದ ಚುನಾವಣೆಯಲ್ಲಿ ಅಕ್ರಮವೆಸಗಿದ ಚುನಾವಣಾಧಿಕಾರಿ ವಿರುದ್ಧ ಮಾತ್ರ ನನ್ನ ಧರಣಿಯಾಗಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ನಾನು ಚುನಾವಣಾ ಅಕ್ರಮದ ಬಗ್ಗೆ ಧರಣಿ ನಡೆಸಿದ್ದೇನೇಯೇ ವಿನಃ ಯಾವುದೇ ವ್ಯಕ್ತಿಗಳ ವಯಕ್ತಿಕ ವಿಚಾರದ ವಿರುದ್ಧ ಅಲ್ಲ. ಇದನ್ನು ಅಭಿನಂದಿಸಿ ಪ್ರೋತ್ಸಾಹಿಸಬೇಕಾದ, ಚುನಾವಣಾ ಅಧಿಕಾರಿಗಳ ನಿಯಮಬಾಹಿರ ವರ್ತನೆ ಹಾಗೂ ಕುತಂತ್ರವನ್ನು ಖಂಡಿಸಬೇಕಾದ, ಪ್ರತಿಷ್ಠಿತ ಸಹಕಾರಿ ರತ್ನ ಪುರಸ್ಕ್ರತರಾದ, ಹಲವಾರು ವರ್ಷಗಳಿಂದ ಸಹಕಾರಿ ರಂಗದಲ್ಲಿರುವ ತಮ್ಮನ್ನು ತೊಡಗಿಸಿಕೊಂಡಿರುವ ಹಲವಾರು ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಿರುವ ಕದಂಬ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾದ ಶಂಭುಲಿಂಗ ಹೆಗಡೆಯವರು ಹಾಗೂ ಮಾತಾ ಸೊಸೈಟಿಯ ಅಧ್ಯಕ್ಷರಾದ ಜಿ.ಎನ್. ಹೆಗಡೆ ಹಿರೇಸರ ರವರು ನನ್ನ ಧರಣಿಯ ವಿರುದ್ಧ ವ್ಯತಿರಿಕ್ತ ಹೇಳಿಕೆ ನೀಡಿರುವ ಹಿಂದಿನ ಉದ್ದೇಶ ಸ್ಪಷ್ಟವಾಗುತ್ತಿಲ್ಲ. ನಿಯಮಾನುಸಾರ ಚುನಾವಣೆ ನಡೆಯಲಿ ಎಂಬುದಷ್ಟೇ ನನ್ನ ಉದ್ದೇಶ. ಆದರೆ ಇವರು ತಮ್ಮ ಹೇಳಿಕೆಯಲ್ಲಿ ರಾಜಕೀಯ ಹಿತಾಸಕ್ತಿ, ಸಂಚು, ಸಹಕಾರಿ ರಂಗಕ್ಕೆ ದ್ರೋಹ, ರಾಜಕೀಯ ಪಕ್ಷಗಳು, ಸಹಕಾರಿ ಅಧಿಕಾರಿಗಳ ಕಛೇರಿ ದುರ್ಬಳಕೆ ಮುಂತಾದ ಶಬ್ದಗಳನ್ನು ಪ್ರಸ್ತಾಪಿಸಿರುವುದನ್ನು ನೋಡಿದರೆ ಚುನಾವಣೆಯ ಪೂರ್ವದಲ್ಲಿಯೇ ವ್ಯವಸ್ಥಿತವಾದ ತಂತ್ರಗಾರಿಕೆ ರೂಪಿಸಲಾಗಿತ್ತೇ? ತಂತ್ರಗಾರಿಕೆ ವ್ಯರ್ಥವಾಯಿತು ಎಂಬ ಬೇಸರವೇ? ಅಥವಾ ಧರಣಿಯಿಂದ ಸಹಕಾರಿ ಚುನಾವಣಾ ತಂತ್ರ ಎಲ್ಲರಿಗೂ ತಿಳಿಯುವಂತಾಯಿತೇ? ಎಂಬ ಅನುಮಾನ ಉಂಟಾಗಿದೆ. 19 ಜನರೂ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದ್ದರೂ ಕೊನೆಯ ಹಂತದಲ್ಲಿ ಯಾವ ಉದ್ದೇಶ ಹಾಗೂ ಯಾರ ಮುಖಂಡತ್ವದಲ್ಲಿ 09 ಜನ ನಾಮಪತ್ರ ಹಿಂಪಡೆದರು? ಎಂಬ ಬಗ್ಗೆ ಜಿಲ್ಲೆಯ ಎಲ್ಲಾ ಸಹಕಾರಿಗಳು ವಿಶ್ಲೇಷಣೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.

ಮಾನ್ಯ ಮುಖ್ಯ ಮಂತ್ರಿಗಳು, ಸಹಕಾರಿ ಸಚಿವರು, ಜಿಲ್ಲಾ ಉಸ್ತುವಾರಿಗೆ ದೂರು: ಕಾನೂನು ಹೋರಾಟ ಮುಂದುವರಿಕೆ:
ಉತ್ತರ ಕನ್ನಡ ಜಿಲ್ಲೆಯ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ 19 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಲವಾರು ರೀತಿಯ ಅಕ್ರಮಗಳು ನಡೆದಿರುವುದರಿಂದ ಈ ಕುರಿತು ಮಾನ್ಯ ಮುಖ್ಯ ಮಂತ್ರಿಗಳು, ಸಹಕಾರಿ ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರಿಗೆ ದೂರು ನೀಡಲಾಗಿದ್ದು ಕಾನೂನು ಹೋರಾಟ ಮುಂದುವರೆಸಿದ್ದೇನೆ.

300x250 AD

Share This
300x250 AD
300x250 AD
300x250 AD
Back to top