ಹೊನ್ನಾವರ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಿಂದುಳಿದ ವರ್ಗದ ಮಹಿಳೆಯಾಗಿ ವಿದ್ಯೆಯನ್ನು ಕಲಿಯದೆ ತಮ್ಮ ಸಾಧನೆಯ ಮೂಲಕ ರಾಷ್ಟ್ರವ್ಯಾಪ್ತಿಯಲ್ಲಿ ಗುರುತಿಸಿ ಕೊಂಡಿದ್ದ ಶುಕ್ರಿ ಬೊಮ್ಮ ಗೌಡರವರು ಅಗಲಿದ್ದು ಜಿಲ್ಲೆಯ ಓರ್ವ ಸಾಧಕಿಯನ್ನು ಕಳೆದು ಕೊಂಡಂತೆ ಆಗಿದೆ ಎಂದು ಮಾಜಿ ಸಚಿವ ಆರ್. ಎನ್. ನಾಯ್ಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಾನಪದ ಹಾಡು, ಕಲೆ, ಸಾಂಸ್ಕೃತಿಕವಾಗಿ ಜಿಲ್ಲೆಯ ಸೊಗಡನ್ನು ರಾಷ್ಟ್ರ ವ್ಯಾಪ್ತಿ ಪಸರಿಸುವಂತೆ ಮಾಡಿದ ದಿಟ್ಟ ಮಹಿಳೆ ಶುಕ್ರಿ ಗೌಡ ನಿಧನ ಜಿಲ್ಲೆಯ ಸಾಂಪ್ರದಾಯಿಕ ಕಲೆಯ ಕೊಂಡಿಯೊಂದನ್ನು ಕಳಚಿದಂತೆ ಆಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.