Slide
Slide
Slide
previous arrow
next arrow

ನೆಮ್ಮದಿ ಕಣಜಕ್ಕೆ ಹಳೆ ಅಮೂಲ್ಯ ವಸ್ತುಗಳ ಕೊಡುಗೆ

300x250 AD

ಶಿರಸಿ: ಹಲವು ತಲೆಮಾರುಗಳ ಹಿಂದಿನ ದಿನ ಬಳಕೆಯ ಹಾಗೂ ಅಪರೂಪ ಸುಮಾರು 500 ಕ್ಕೂ ಮಿಕ್ಕ ಹಳೆ ವಸ್ತುಗಳನ್ನು ಸಂಗ್ರಹಿಸಿದ್ದ ಕೆ.ಜಿ.ಕಡೇಕೋಡಿ ಅವರ ನೆನಪಿನಲ್ಲಿ  ಅವರ ಪುತ್ರ  ಗೋಪಾಲಕೃಷ್ಣ ಕಡೇಕೋಡಿ ನಗರದ ವಿದ್ಯಾನಗರ ರುದ್ರಭೂಮಿಯ ಆವರಣದಲ್ಲಿರುವ “ಕಣಜ”ಕ್ಕೆ ಕೊಡುಗೆಯಾಗಿ ನೀಡಿದರು.

ಬಳಿಕ ಮಾತನಾಡಿದ ಗೋಪಾಲಕೃಷ್ಣ ಕಡೇಕೋಡಿ ಸಂಗ್ರಹದ ಮಹತ್ವ ವಿವರಿಸಿ, ಯೋಗ್ಯ ಜನರಾದ ವಿ.ಪಿ ಹೆಗಡೆ ಅವರಿಗೆ ಖುಷಿಯಿಂದ ವಹಿಸುತ್ತಿದ್ದೇನೆ. ಮುಂದಿನ ತಲೆಮಾರಿನ ಜನಕ್ಕೆ ವಿವರಿಸುವ ಕೆಲಸವಾಗಲಿ ಎಂದರು.

300x250 AD

ವೇದಿಕೆಯಲ್ಲಿ ರುದ್ರಭೂಮಿ ಸಮಿತಿಯ ನಿರ್ದೇಶಕ ಶ್ರೀನಿವಾಸ್ ಹೆಬ್ಬಾರ್, ಎಂ.ಪಿ.ಹೆಗಡೆ, ಸುಭಾಶ್ಚಂದ್ರ ಭೋಸ್ ಕಾರ್ಯಪಡೆಯ ಸದಸ್ಯರು, ಡಾ. ಶಿವರಾಮ್ ಕೆ.ವಿ., ಸ್ಕಾಡವೇಸ್ ವೆಂಕಟೇಶ್ ನಾಯ್ಕ, ಡಾ. ಕೇಶವ ಕೊರ್ಸೆ, ಕೆ.ಎಂ.ಹೆಗಡೆ ಭೈರುಂಬೆ, ಡಾ. ರವಿಕಿರಣ‌ ಪಟವರ್ಧನ್, ರುದ್ರಭೂಮಿಯ ಸದಸ್ಯರು, ಯಕ್ಷಗಾನ, ಭರತನಾಟ್ಯ ಯೋಗ ಇತ್ಯಾದಿ ತರಗತಿಗಳ ಮುಖ್ಯಸ್ಥರು ಇದ್ದರು. ನರ್ಮದಾ ಹೆಗಡೆ ಸ್ವಾಗತಿಸಿದರು. ವೈಶಾಲಿ ವಿ.ಪಿ.ಹೆಗಡೆ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top